ಯಳಂದೂರು: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಮಾಂಬಳ್ಳಿ ಗ್ರಾಮದ ಕಿನಕಹಳ್ಳಿ ಕ್ರಾಸ್ ಬಳಿ ರಸ್ತೆಯಲ್ಲಿ ನಡೆದಿದೆ.
ಮದ್ದೂರು ಗ್ರಾಮದ ಅಸ್ಲಂಪಾಷ ಹಾಗೂ ಮುಳ್ಳೂರು ಗ್ರಾಮದ ಸುದೀಪ್ ಬಂಧಿತರು. ಇವರು ಪ್ಯಾಸೆಂಜರ್ ಆಟೋದಲ್ಲಿ 7ಚೀಲಗಳಲ್ಲಿ 6670 ರೂ. ಮೌಲ್ಯದ 444ಕಿಲೋ ಅಕ್ಕಿಯನ್ನು ಮುಳ್ಳೂರು ಗ್ರಾಮದಲ್ಲಿ ಕಡಿಮೆ ಬೆಲೆಗೆ ಖರೀದಿಸಿ ಇದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಆಹಾರ ನಿರೀಕ್ಷಕ ಬಿಸಲಯ್ಯ ಮತ್ತು ಮಾಂಬಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಕರಿಬಸಪ್ಪ, ಮುಖ್ಯಪೇದೆ ಪರಶಿವಮೂರ್ತಿ, ಕಿಶೋರ್, ಪೇದೆಗಳಾದ ಶಿವಕುಮಾರ್, ಬಸವರಾಜ್‌ಗುತ್ತಲ್ ನೇತೃತ್ವದ ತಂಡ ದಾಳಿ ಮಾಡಿದ್ದು, ಆಟೋ ಸಹಿತ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಈ ಸಂಬಂಧ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.