Bengaluru 23°C
Ad

ನಾಯಿಯನ್ನ ಭೇಟೆಯಾಡಿ ಎಳೆದೊಯ್ದ ಹುಲಿ: ವಿಡಿಯೋ ವೈರಲ್‌

ಬೀದಿ ನಾಯಿಯನ್ನ ಭೇಟೆಯಾಡಿದ ಹುಲಿ ಎಳೆದೊಯ್ಯುತ್ತಿರುವ ದೃಶ್ಯ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕಂಡುಬಂದಿದ್ದು ಸಪಾರಿಗೆ ತೆರಳಿದ್ದ ಪ್ರವಾಸಿಗರು ಸನಿಹದಲ್ಲೇ ಬೇಟೆ ದೃಶ್ಯವನ್ನ ನೋಡಿ ಪುಳಕಿತರಾಗಿದ್ದಾರೆ.

ಗುಂಡ್ಲುಪೇಟೆ: ಬೀದಿ ನಾಯಿಯನ್ನ ಭೇಟೆಯಾಡಿದ ಹುಲಿ ಎಳೆದೊಯ್ಯುತ್ತಿರುವ ದೃಶ್ಯ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕಂಡುಬಂದಿದ್ದು ಸಪಾರಿಗೆ ತೆರಳಿದ್ದ ಪ್ರವಾಸಿಗರು ಸನಿಹದಲ್ಲೇ ಬೇಟೆ ದೃಶ್ಯವನ್ನ ನೋಡಿ ಪುಳಕಿತರಾಗಿದ್ದಾರೆ.

ಆದರೆ ಬೀದಿ ನಾಯಿ ಕಾಡಿನೊಳಗೆ ಪ್ರವೇಶಿಸಿದ್ದಾದರು ಹೇಗೆ ಎಂದು ಪ್ರತ್ಯಕ್ಷದರ್ಶಿಗಳು ಆಶ್ಚರ್ಯಚಕಿತರಾಗಿದ್ದಾರೆ.

ಗುರುವಾರ ಸಂಜೆ ಸಪಾರಿಗೆ ತೆರಳಿದ್ದವರಿಗೆ ಈ ದ್ರಶ್ಯ ಕಾಣಸಿಕ್ಕಿದೆ ಹುಲಿಯು ಭೇಟೆಯಾಡಿ ಎಳೆದೊಯ್ಯುತ್ತಿರುವ ದೃಶ್ಯವನ್ನ ಸಪಾರಿಗೆ ತೆರಳಿದ್ದವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸೂಕ್ಷ್ಮವಾಗಿ ಗಮನಿಸಿದ ಬಳಿಕ ಅದು ಬೀದಿ ನಾಯಿ ಎಂದು ಖಾತರಿಯಾಗಿದೆ.

ಆದರೆ ಕಾಡಿನ ಒಳಗೆ ಬೀದಿ ನಾಯಿ ಪ್ರವೇಶಿಸಿದ್ದಾದರು ಹೇಗೆ ಎಂದು ಆಶ್ಚರ್ಯಗೊಂಡಿದ್ದಾರೆ. ಕಾಡಂಚಿನ ಗ್ರಾಮದ ನಾಯಿಗಳು ಒಮ್ಮೊಮ್ಮೆ ಆಹಾರವನ್ನರಸಿ ಕಾಡಿನೊಳಗೂ ಪ್ರವೇಶ ಮಾಡುತ್ತವೆ ಎಂದು ಹೇಳಲಾಗುತ್ತಿದೆ.

Ad
Ad
Nk Channel Final 21 09 2023
Ad