Ad

ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಹುಲಿ ಪ್ರತ್ಯಕ್ಷ

ಗೋಪಾಲಸ್ವಾಮಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಇಂದು ಬೆಳ್ಳಂಬೆಳಿಗ್ಗೆ ಹುಲಿಯೊಂದು ದರ್ಶನ ನೀಡಿದ್ದು ಸನಿಹದಲ್ಲೇ ಹುಲಿಯನ್ನ ಕಂಡು ಪುಳಕಿತಗೊಂಡ ಪ್ರವಾಸಿಗರು ತಮ್ಮ ಮೊಬೈಲ್ಗಳಲ್ಲಿ ಹುಲಿಯ ಗಾಂಭೀರ್ಯದ ನಡೆಯನ್ನ ಸೆರೆಹಿಡಿದಿದ್ದಾರೆ.

ಗುಂಡ್ಲುಪೇಟೆ : ಗೋಪಾಲಸ್ವಾಮಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಇಂದು ಬೆಳ್ಳಂಬೆಳಿಗ್ಗೆ ಹುಲಿಯೊಂದು ದರ್ಶನ ನೀಡಿದ್ದು ಸನಿಹದಲ್ಲೇ ಹುಲಿಯನ್ನ ಕಂಡು ಪುಳಕಿತಗೊಂಡ ಪ್ರವಾಸಿಗರು ತಮ್ಮ ಮೊಬೈಲ್ಗಳಲ್ಲಿ ಹುಲಿಯ ಗಾಂಭೀರ್ಯದ ನಡೆಯನ್ನ ಸೆರೆಹಿಡಿದಿದ್ದಾರೆ.

Ad
300x250 2

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಪ್ರತಿಷ್ಠಿತ ಧಾರ್ಮಿಕ ಕೇಂದ್ರ ಗೋಪಾಲಸ್ವಾಮಿ ಬೆಟ್ಟದಲ್ಲಿ ಶ್ರೀಕೃಷ್ಣನ ದರ್ಶನಕ್ಕೆ ತೆರಳುತ್ತಿದ್ದ ಭಕ್ತವೃಂದಕ್ಕೆ ಮತ್ತು ಪ್ರವಾಸಿಗರಿಗೆ ದೇಗುಲದ ಆವರಣದಲ್ಲೇ ಒಂಟಿ ಸಲಗ ದರ್ಶನ ನೀಡುತ್ತಿತ್ತು ಆದ್ರೆ ಕೆಲ ದಿನಗಳಿಂದ ಬೆಟ್ಟದ ತಪ್ಪಲಿನ ರಸ್ತೆ ಬದಿಯಲ್ಲೇ ಹುಲಿಗಳು ಕಾಣಸಿಗುತ್ತಿವೆ ಇದರಿಂದ ಬೆಟ್ಟದ ಹಿರಿಮೆ ಮತ್ತಷ್ಟು ಹಿಮ್ಮಡಿಯಾಗಲು ಕಾರಣವಾಗಿದೆ. ಇಂದು ಮುಂಜಾನೆ ದೇಗುಲಕ್ಕೆ ತೆರಳುತ್ತಿದ್ದ ಪ್ರವಾಸಿಗರಿಗೆ ಸನಿಹದಲ್ಲೇ ದರ್ಶನ ನೀಡಿದ ಹುಲಿ ಪ್ರವಾಸಿಗರು ಪುಲಕಿತಗೊಳ್ಳುವಂತೆ ಮಾಡಿದೆ.

Ad
Ad
Nk Channel Final 21 09 2023
Ad