Bengaluru 24°C
Ad

ಸರ್ಕಾರಿ ಕಚೇರಿ ಆವರಣದಲ್ಲಿದ್ದ ಶ್ರೀಗಂಧದ ಮರ ಕತ್ತರಿಸಿದ ಕಳ್ಳರು

ಸರ್ಕಾರಿ ಕಚೇರಿ ಆವರಣದಲ್ಲಿದ್ದ ಶ್ರೀಗಂಧದ ಮರವನ್ನ ಕಳ್ಳರು ಕತ್ತರಿಸಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಜಿಲ್ಲಾಪಂಚಾಯತ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮುಂಭಾಗ ನಡೆದಿದೆ.

ಗುಂಡ್ಲುಪೇಟೆ: ಸರ್ಕಾರಿ ಕಚೇರಿ ಆವರಣದಲ್ಲಿದ್ದ ಶ್ರೀಗಂಧದ ಮರವನ್ನ ಕಳ್ಳರು ಕತ್ತರಿಸಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಜಿಲ್ಲಾಪಂಚಾಯತ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮುಂಭಾಗ ನಡೆದಿದೆ.

ಗುಂಡ್ಲುಪೇಟೆ ಪಟ್ಟಣದ ಸುರಭಿ ಸಮೀಪವಿರುವ ಈ ಕಚೇರಿ ಆವರಣದಲ್ಲಿ ಈ ಹಿಂದೆಯೂ ಸಹ ಶ್ರೀಗಂಧದ ಮರಗಳನ್ನ ಕಳ್ಳರು ಸುಲಭವಾಗಿ ಕತ್ತರಿಸಿ ಹೋಗಿದ್ದರು ಕ್ರಮೇಣ ಆವರಣದಲ್ಲಿದ್ದ ಒಂದಷ್ಟು ಶ್ರೀಗಂಧದ ಮರಗಳಿಗೆ ಕತ್ತರಿ ಹಾಕಿರುವ ಕಳ್ಳರು ಚಾಣಾಕ್ಷತನ ತೋರಿದ್ದಾರೆ.

ಶ್ರೀಗಂಧ ಮರ ಕಳವು ಕುರಿತಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಳಿದಿದ್ದ ಮರಗಳಿಗೂ ಕುತ್ತು ಬಂದಿದೆ, ರಾತ್ರಿ ವೇಳೆ ಸರಿಯಾಗಿ ಗಸ್ತು ನಡೆಸದ ಕಾರಣ ಕಳ್ಳರು ತಮ್ಮ ಹಾದಿಯನ್ನ ಸುಗಮವಾಗಿರಿಸಿಕೊಂಡಿದ್ದಾರೆ, ಮುಂಬರುವ ದಿನಗಳಲ್ಲಾದರು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.

Ad
Ad
Nk Channel Final 21 09 2023
Ad