ಚಾಮರಾಜನಗರ : ಚಲಿಸುತ್ತಿದ್ದ ಖಾಸಗಿ ಬಸ್ ವೊಂದು ಕಾರಿನ ಮೇಲೆ ಪಲ್ಪಿ ಹೊಡೆದ ಪರಿಣಾಮ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ತೀವ್ರ ಸ್ವರೂಪದ ಗಾಯವಾಗಿರುವ ಘಟನೆ ಕರ್ನಾಟಕ ತಮಿಳುನಾಡು ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿ ಜಿ ಪಾಳ್ಯ ಸಮೀಪ ಹೊಸ ದೊಡ್ಡಿ ಗ್ರಾಮದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹನೂರು ತಾಲೂಕಿನ ಒಡೆಯರಪಾಳ್ಯ ದಿಂದ ಕೊಳ್ಳೇಗಾಲದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ರಾಮಾಪುರ ದಿಂದ ಬಣ್ಣಾರಿ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಈ ಅವಘಡ ಸಂಭವಹಿಸಿದೆ.
ಬಸ್ ಗೆ ಪಲ್ಟಿಯಾಗುತ್ತಿದ್ದಂತೆ ಕಾರು ನುಗ್ಗಿದ ಪರಿಣಾಮ ಎರಡು ವಾಹವೂ ಜಖಂ ಆಗಿದೆ ಗಾಯಾಳುಗಳನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಬಸ್ ವೊಂದು ಕಾರಿನ ಮೇಲೆ ಪಲ್ಟಿಯಾಗಿ 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಒಂದು ವೇಳೆ ಅಡ್ಡಲಾಗಿ ಕಾರು ಇಲ್ಲದೆ ಹೋಗಿದ್ದರೆ ಬಸ್ ಪ್ರಪಾತಕ್ಕೆ ಉರುಳುವ ಸಾಧ್ಯತೆ ಇತ್ತಲ್ಲದೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.