Bengaluru 24°C
Ad

ನ್ಯೂಸ್ ಕರ್ನಾಟಕ ಇಂಪ್ಯಾಕ್ಟ್ : ಪಂಜನಹಳ್ಳಿ ರಸ್ತೆ ದುರಸ್ತಿ ಕಾರ್ಯ ಆರಂಭ

ಶುಕ್ರವಾರವಷ್ಟೇ ಗುಂಡ್ಲುಪೇಟೆ ತಾಲೂಕಿನ ಪಂಜನಹಳ್ಳಿ ಗ್ರಾಮದ ರಸ್ತೆ ದುಸ್ಥಿತಿ ಕುರಿತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದನ್ನ ಸವಿವಿಸ್ತಾರವಾಗಿ ನ್ಯೂಸ್ ಕರ್ನಾಟಕ ವಾಹಿನಿ ಸುದ್ದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು ,

ಗುಂಡ್ಲುಪೇಟೆ : ಶುಕ್ರವಾರವಷ್ಟೇ ಗುಂಡ್ಲುಪೇಟೆ ತಾಲೂಕಿನ ಪಂಜನಹಳ್ಳಿ ಗ್ರಾಮದ ರಸ್ತೆ ದುಸ್ಥಿತಿ ಕುರಿತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದನ್ನ ಸವಿವಿಸ್ತಾರವಾಗಿ ನ್ಯೂಸ್ ಕರ್ನಾಟಕ ವಾಹಿನಿ ಸುದ್ದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು ,

ಕನ್ನಡ ಪರ ಸಂಘಟನೆ , ಸ್ಥಳೀಯ ಗ್ರಾಮಸ್ತರು ನ್ಯೂಸ್ ಕರ್ನಾಟಕದ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ. ತಾಲೂಕಿನಿಂದ ಕೂಗಳತೆ ದೂರದಲ್ಲಿರುವ ಪಂಜನಹಳ್ಳಿ ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕ ವ್ಯವಸ್ಥೆ ಇಲ್ಲದದನ್ನ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು , ಸ್ಥಳೀಯ ಗ್ರಾಮಸ್ಥರು ಲೋಕೋಪಯೋಗಿ ಕಚೇರಿ ಮುಂಭಾಗ ಪ್ರತಿಭಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಗ್ರಾಮದ ರಸ್ತೆ ಸಮಸ್ಯೆಯನ್ನ ಸಂಕ್ಷಿಪ್ತವಾಗಿ ಅಧಿಕಾರಿಗಳ ಗಮನಕ್ಕೆ ತಂದ ನ್ಯೂಸ್ ಕರ್ನಾಟಕ ವಾಹಿನಿ ಸಮಸ್ಯೆಗೆ ಮುಕ್ತಿ ನೀಡುವಲ್ಲಿ ಗ್ರಾಮಸ್ಥರ ಜೊತೆ ಕೈ ಜೋಡಿಸಿ ಯಶ ಪಡೆದಿದೆ.

ಇಂದು ಮುಂಜಾನೆಯಿಂದಲೇ ಕಾಮಗಾರಿ ಕೆಲಸ ಆರಂಭವಾಗಿದ್ದು ಕೆಲವೇ ದಿನಗಳಲ್ಲಿ ಡಾಂಭಾರು ರಸ್ತೆ ಪೂರ್ಣಗೊಳ್ಳುವುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Ad
Ad
Nk Channel Final 21 09 2023
Ad