Bengaluru 21°C
Ad

ಅಪಾಯದಂಚಿನತ್ತ ಬ್ರಿಟೀಷರು ನಿರ್ಮಾಣ ಮಾಡಿರುವ ಮುಡಿಗುಂಡಂ ಸೇತುವೆ

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ನಿರ್ಮಿಸಿರುವ  ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮುಡಿಗುಂಡಂ ಬಳಿ ಕೊಳ್ಳೇಗಾಲ-ಮೈಸೂರು-ಚಾಮರಾಜನಗರ ನಡುವೆ ಇರುವ ಹೊನ್ನೊಳೆ ಸೇತುವೆ ಇದೀಗ ಅಪಾಯದಂಚಿನತ್ತ ಸಾಗಿದೆ.

ಚಾಮರಾಜನಗರ: ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ನಿರ್ಮಿಸಿರುವ  ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮುಡಿಗುಂಡಂ ಬಳಿ ಕೊಳ್ಳೇಗಾಲ-ಮೈಸೂರು-ಚಾಮರಾಜನಗರ ನಡುವೆ ಇರುವ ಹೊನ್ನೊಳೆ ಸೇತುವೆ ಇದೀಗ ಅಪಾಯದಂಚಿನತ್ತ ಸಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿರುವ ಸೇತುವೆ ಶತಮಾನದತ್ತ ಸಾಗುತ್ತದೆ. ಪ್ರತಿನಿತ್ಯ ಇದೇ ಸೇತುವೆ ಮೇಲೆ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಅದರಲ್ಲೂ ಹೆಚ್ಚಾಗಿ ಪವಾಡ ಪುರುಷ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರು ಸಾಗುವ ಬಸ್, ಹಾಗೂ ಇನ್ನಿತರ ವಾಹನಗಳೇ ಅಧಿಕವಾಗಿರುತ್ತದೆ.

1934 ರಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ಅಂದಿನ ತಂತ್ರಜ್ಞಾನಕ್ಕೆತಕ್ಕಂತೆ ಹಾಗೂ ವಾಹನ ಸಂಚಾರಕ್ಕೆ ತಕ್ಕಂತೆ ಹೊನ್ನೊಳೆ ಸೇತುವೆ ನಿರ್ಮಾಣವಾಗಿತ್ತು. ಇದೀಗ ಜನ ಸಂಖ್ಯೆ ಹೆಚ್ಚಾಗಿದ್ದು, ಇದರ ಜೊತೆಗೆ ವಾಹನ ಸಂಚಾರವು ಬಿಡುವಿಲ್ಲದೆ ಸಂಚಾರಿಸುತ್ತಿರುತ್ತದೆ. ಅಧಿಕ ಭಾರ ಹೊತ್ತ ವಾಹನಗಳು ಸೇತುವೆ ಮೇಲೆ ಸಂಚಾರ ಮಾಡಿದರೆ ಸೇತುವೆಯು ತೀರಾ ಅಪಾರದಂಚಿಗೆ ಸಿಲುಕಲಿದೆ.

ಈಗಾಗಲೇ ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಮಾಹಿತಿ ಇದ್ದರೂ ಸಹ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಸ್ಥಳ ಪರಿಶೀಲನೆ ಮಾಡಿದ್ದಾರೆ ವಿನಃ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಲಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಈಗಾಗಲೇ ಈ ಸೇತುವೆಯ ಕೆಳಗೆ ಬಿರುಕು ಬಿಟ್ಟಿದ್ದು, ತಡೆಗೋಡೆಗಳು ಕುಸಿಯುತ್ತಿದೆ. ಸೇತುವೆ ನಿರ್ಮಾಣಕ್ಕೆ ಬಳಸಿರುವ ಕಬ್ಬಿಣಗಳು ತುಕ್ಕು ಹಿಡಿಯುತ್ತಿದ್ದು, ಕಬ್ಬಿಣದ ಶಕ್ತಿ ಕುಂದುತ್ತಿದೆ. ಏನಾದರೂ ಸೇತುವೆ ಕುಸಿದರೆ ಕೊಳ್ಳೇಗಾಲ, ಮೈಸೂರು ಮತ್ತು ಚಾಮರಾಜನಗರ ಸಂಚಾರ ಬಂದ್ ಆಗಲಿದೆ.

ಈ ಬಗ್ಗೆ ರಾಜ್ಯ ಸರ್ಕಾರವು ಗಮನ ಹರಿಸಿ ಮುಡಿಗುಂಡಂ ಬಳಿ ಶಾಶ್ವತವಾದ ಬಲಿಷ್ಟ ಸೇತುವೆಯನ್ನು ನಿರ್ಮಾಣ ಮಾಡಬೇಕಾಗಿದೆ ಎನ್ನುವುದು ಈ ಭಾಗದ ಜನತೆಯ ಮನವಿಯಾಗಿದೆ.

Ad
Ad
Nk Channel Final 21 09 2023
Ad