Bengaluru 27°C
Ad

ತಮಿಳುನಾಡಿಗೆ ಹುಲಿ ಉಗುರು ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಹುಲಿ ಉಗುರುಗಳನ್ನು ತಮಿಳುನಾಡಿಗೆ ಕೊಂಡೊಯ್ದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದು. ಬಂಧಿತನಿಂದ ಐದು ಹುಲಿ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ.

ಚಾಮರಾಜನಗರ: ಹುಲಿ ಉಗುರುಗಳನ್ನು ತಮಿಳುನಾಡಿಗೆ ಕೊಂಡೊಯ್ದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದು. ಬಂಧಿತನಿಂದ ಐದು ಹುಲಿ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ.

Ad

ಚಾಮರಾಜನಗರ ಜಿಲ್ಲೆಯ ಬಿಳಿಗಿರಿಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪುಣಜನೂರು ವಲಯದ ಬೂದಿ ಪಡಗ ಗ್ರಾಮದ ನಿವಾಸಿ ಚಿಕ್ಕಮಾದ ಬಂಧಿತ ಆರೋಪಿ. ಈತ ತನ್ನ ಬಳಿಯಿದ್ದ ಹುಲಿ ಉಗುರುಗಳನ್ನು ತಮಿಳುನಾಡಿಗೆ ಸಾಗಿಸುವ ಸಲುವಾಗಿ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪುಣಜನೂರು ವನ್ಯಜೀವಿ ವಲಯದಲ್ಲಿ ತೆರಳುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ.

Ad

ಆರೋಪಿ ಚಿಕ್ಕಮಾದ ತನ್ನ ಬಳಿ ಐದು ಹುಲಿ ಉಗುರುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು, ಇದನ್ನು ಪಕ್ಕದ ತಮಿಳು ನಾಡಿಗೆ ತೆರಳಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದನು.

Ad

ಹ (1)

ಹೀಗಾಗಿ ಈತ ಹುಲಿ ಉಗುರುಗಳೊಂದಿಗೆ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪುಣಜನೂರು ವನ್ಯಜೀವಿ ವಲಯದ ಮೂಲಕ ತೆರಳುತ್ತಿದ್ದ ವೇಳೆ ಚಾಮರಾಜನಗರ ವೃತ್ತ ಗುಪ್ತಚರ ಘಟಕದ ಉಪ ವಲಯ ಅರಣ್ಯಾಧಿಕಾರಿ ಹೇಮಂತಕುಮಾರ್ ರವರ ಮಾಹಿತಿಯನ್ನು ಆಧರಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹಿರಾಲಾಲ್ ಮಾರ್ಗದರ್ಶನದಂತೆ ಡಿಸಿಎಫ್ ಶ್ರೀಪತಿ ನಿರ್ದೇಶನದಲ್ಲಿ ಪುಣಜನೂರು ವನ್ಯಜೀವಿ ವಲಯದ ವಲಯ ಅರಣ್ಯಧಿಕಾರಿ ಮಂಜುನಾಥ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Ad

ಬಂಧಿತ ಚಿಕ್ಕಮಾದನನ್ನು ಪರಿಶೀಲನೆಗೊಳಪಡಿಸಿದಾಗ ಆತನ ಬಳಿ ಸುಮಾರು ಐದು ಹುಲಿ ಉಗುರುಗಳು ಪತ್ತೆಯಾಗಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈತನಿಗೆ ಹೇಗೆ ಹುಲಿ ಉಗುರು ಸಿಕ್ಕಿದೆ ಎಂಬುದರ ತನಿಖೆ ನಡೆಸಿ ಈತನ ಹಿಂದೆ ಯಾವುದಾದರೂ ಕಾಣದ ಕೈಗಳಿವೆಯಾ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ.

Ad
Ad
Ad
Nk Channel Final 21 09 2023