Ad

ಪರಮಾಪುರದಲ್ಲಿ ಕುರಿ ಮೇಲೆ ಚಿರತೆ ದಾಳಿ: ಪರಿಹಾರಕ್ಕೆ ಒತ್ತಾಯ

ತಾಲೂಕಿನ ಪರಮಾಪುರ ಗ್ರಾಮದ ಹೊರವಲಯದಲ್ಲಿ ಚಿರತೆ ದಾಳಿ ನಡೆಸಿ ಎರಡು ಕುರಿಗಳನ್ನು ಕೊಂದು ಹಾಕಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಗುಂಡ್ಲುಪೇಟೆ: ತಾಲೂಕಿನ ಪರಮಾಪುರ ಗ್ರಾಮದ ಹೊರವಲಯದಲ್ಲಿ ಚಿರತೆ ದಾಳಿ ನಡೆಸಿ ಎರಡು ಕುರಿಗಳನ್ನು ಕೊಂದು ಹಾಕಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

Ad
300x250 2

ಪರಮಾಪುರ ಗ್ರಾಮದ ಚಂದ್ರಶೇಖರ್ ಎಂಬುವರಿಗೆ ಸೇರಿದ ಕುರಿಗಳು ಇದಾಗಿದ್ದು, ರೇವಣ್ಣ ಎಂಬುವರ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಚಿರತೆ ಎರಡು ಮರಿಗಳನ್ನು ಕೊಂದು ಹಾಕಿದ್ದು ಒಂದನ್ನು ಎಳೆದೊಯ್ದಿದೆ.

ಚಿರತೆ ದಾಳಿ ನಡೆಸಿದ ವೇಳೆ ಮಾಲೀಕರು ಚೀರಿಕೊಂಡ ಪರಿಣಾಮ ಸ್ಥಳದಿಂದ ಕಾಲ್ಕಿತ್ತಿದೆ, ಇದರಿಂದ ಮಾಲೀಕರಿಗೆ ತೀವ್ರ ನಷ್ಟ ಉಂಟಾಗಿದೆ.

ಪರಿಹಾರಕ್ಕೆ ಒತ್ತಾಯ : ಎರಡು ಕುರಿಗೆ ಸುಮಾರು 20 ಸಾವಿರ ನಷ್ಟ ಉಂಟಾಗಿದ್ದು ಇದನ್ನೆ ನಂಬಿ ಜೀವನ ಸಾಗಿಸುತಿದ್ದ ಮಾಲೀಕರು ಕಂಗಲಾಗಿದ್ದು, ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡುವಂತೆ ಮಾಲೀಕರು ಒತ್ತಾಯಿಸಿದ್ದಾರೆ.

Ad
Ad
Nk Channel Final 21 09 2023
Ad