ಚಾಮರಾಜನಗರ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಮಾಲು ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯು ಎರಡು ಪ್ಲಾಸ್ಟಿಕ್ ಚೀಲದಲ್ಲಿ 102 ಕೆಜಿ ಅಕ್ಕಿ ಹಾಗೂ ನಾಲ್ಕು ಪ್ಲಾಸ್ಟಿಕ್ ಚೀಲದಲ್ಲಿ 200ಕೆಜಿ ರಾಗಿಯನ್ನು ಸಂಗ್ರಹಿಸಿ ಪ್ಯಾಸೆಂಜರ್ ಆಟೋದಲ್ಲಿ ಕುದೇರು ಠಾಣೆಯ ವ್ಯಾಪ್ತಿಯ ಆಲ್ದೂರುಗೆಟ್ ಕಡೆಯಿಂದ ಟಿ ನರಸೀಪುರ ರಸ್ತೆ ಕಡೆಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದನು.
ಈ ವೇಳೆ ಖಚಿತ ವರ್ತಮಾನದ ಮೇರೆಗೆ ಕುದೇರು ಠಾಣೆಯ ಪಿ ಎಸ್ ಐ ಕುಮುದ ತಂಡ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಾಹನ ಸಹಿತ ಅಕ್ರಮ ಅಕ್ಕಿ ಮತ್ತು ರಾಗಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಆಹಾರ ಇಲಾಖೆ ಅಧಿಕಾರಿ ದಿನಕರ್, ಪೊಲೀಸ್ ಸಿಬ್ಬಂದಿ ನಾಗ ನಾಯ್ಕ,ರವಿ, ಶಂಕರ್ ಗುರು ಮತ್ತಿತರರು ಭಾಗವಹಿಸಿದ್ದರು.