ಚಾಮರಾಜನಗರ: ಸ್ನಾನಕ್ಕೆಂದು ನೀರು ಕಾಯಿಸಲು ಹಚ್ಚಿದ್ದ ಬೆಂಕಿಯು ತೆಂಗಿನ ಮಟ್ಟೆ ರಾಶಿಗೆ ವ್ಯಾಪಿಸಿ ಮನೆ ಭಸ್ಮವಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರದಲ್ಲಿ ಗುರುವಾರ ರಾತ್ರಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರ ಗ್ರಾಮದ ವಿನೋದ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ನೀರು ಕಾಯಿಸಲು ಬೆ೦ಕಿ ಹ೦ಚಿದ್ದ ವೇಳೆ ಹತ್ತಿರದಲ್ಲೇ ಇದ್ದ ತೆಂಗಿನಕಾಯಿ ಮಟ್ಟೆ ರಾಶಿಗೂ ಬೆ೦ಕಿ ಹೊತ್ತಿಕೊ೦ಡು ಬಳಿಕ ಮನೆಯೇ ಹೊತ್ತಿ ಉರಿದು ನಾಶವಾಗಿದೆ.
ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಮನೆಯಲ್ಲಿದ್ದ ಸರಕುಗಳು ಬೆಂಕಿಗೆ ಸಂಪೂರ್ಣವಾಗಿ ಆಹುತಿಯಾಗಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.