ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯ ಚಾಮರಾಜನಗರ ವಿಭಾಗದ ಅಧೀನದಲ್ಲಿ 5 ಉಪವಿಭಾಗಗಳು ಹಾಗೂ 19 ಶಾಖಾ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಚಾಮರಾಜನಗರ ವಿಭಾಗ ವ್ಯಾಪ್ತಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಸ್ಥಳಗಳನ್ನು ಗುರುತಿಸಿ ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಉಪವಿಭಾಗಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಸಾರ್ವಜನಿಕರ ಸಹಾಯಕ್ಕಾಗಿ ಸಹಾಯವಾಣಿಯನ್ನು ಸ್ಥಾಪನೆ ಮಾಡಲಾಗಿದೆ.
ಗ್ರಾಹಕರ ಕುಂದುಕೊರತೆ, ಅಹವಾಲುಗಳನ್ನು ಪರಿಹರಿಸಲು ಪ್ರತಿ ಉಪವಿಭಾಗಕ್ಕೆ ಒಂದರಂತೆ 24×7 ಅವಧಿಯ ದೂರು ನಿರ್ವಹಣಾ ಕೇಂದ್ರಗಳಿದ್ದು, ಗ್ರಾಮ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಬಂಧಿತ ಅಪಾಯಕಾರಿ ಸ್ಥಿತಿಯಲ್ಲಿರುವ ಸ್ಥಳಗಳು ಕಂಡುಬಂದಲ್ಲಿ ಹಾಗೂ ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಉಪವಿಭಾಗಗಳ ದೂರವಾಣಿ ಸಂಖ್ಯೆಗೆ ಕರೆಮಾಡಿ ಪರಿಹರಿಸಿಕೊಳ್ಳಬಹುದಾಗಿದೆ.
ಚಾಮರಾಜನಗರ ಉಪವಿಭಾಗ ದೂ.ಸಂ 08226-225038, ಮೊ.ಸಂ 9449598686, 9449598666, ಹರದನಹಳ್ಳಿ ಉಪವಿಭಾಗ ಮೊ.ಸಂ 9448283397, ಸಂತೇಮರಹಳ್ಳಿ ಉಪವಿಭಾಗ ಮೊ.ಸಂ 9448283398, ಗುಂಡ್ಲುಪೇಟೆ ಉಪವಿಭಾಗ ಮೊ.ಸಂ 9448289404, ಬೇಗೂರು ಉಪವಿಭಾಗ ಮೊ.ಸಂ 9448289421 ಅನ್ನು ಸಂಪರ್ಕಿಸಬಹುದು.
ಇನ್ನಿತರೆ ಹೆಚ್ಚಿನ ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ನಿಗಮದ ಕೇಂದ್ರೀಯ ದೂರು ನಿರ್ವಹಣಾ ಘಟಕದ ಉಚಿತ ದೂ.ಸಂ 1912 ಅಥವಾ ಮೊ.ಸ 9448991912 ಸಂಖ್ಯೆಗೆ ವಾಟ್ಸಾಪ್ ದೂರು ನೀಡಬಹುದು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.