Bengaluru 22°C
Ad

ಜಿಲ್ಲಾಧಿಕಾರಿಗಳ ಉದ್ಯಾನದಿಂದಲೇ ಶ್ರೀಗಂಧ ಮರ ಕಳ್ಳತನಕ್ಕೆ ವಿಫಲಯತ್ನ

ಶ್ರೀಗಂಧ ಮರ ಎಲ್ಲಿದ್ದರೂ ಅದನ್ನು ಕಳ್ಳತನ ಮಾಡುವ ಕಳ್ಳರ ಸಂಖ್ಯೆ ಜಾಸ್ತಿಯಾಗಿದ್ದು, ಕಾಡು ಮಾತ್ರವಲ್ಲದೆ ಊರಿನಲ್ಲಿದ್ದರೂ ಅದನ್ನು ಚಾಣಾಕ್ಷ್ಯತನದಿಂದ ಕಳ್ಳತನ ಮಾಡುತ್ತಿದ್ದು, ಇದೀಗ ಇಲ್ಲಿನ ಜಿಲ್ಲಾಧಿಕಾರಿಗಳ ನಿವಾಸದ ಉದ್ಯಾನವನದಲ್ಲಿದ್ದ ಶ್ರೀಗಂಧ ಮರಗಳನ್ನು ಕಳವು ಮಾಡಲು ಕಳ್ಳರು ವಿಫಲ ಯತ್ನ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಚಾಮರಾಜನಗರ: ಶ್ರೀಗಂಧ ಮರ ಎಲ್ಲಿದ್ದರೂ ಅದನ್ನು ಕಳ್ಳತನ ಮಾಡುವ ಕಳ್ಳರ ಸಂಖ್ಯೆ ಜಾಸ್ತಿಯಾಗಿದ್ದು, ಕಾಡು ಮಾತ್ರವಲ್ಲದೆ ಊರಿನಲ್ಲಿದ್ದರೂ ಅದನ್ನು ಚಾಣಾಕ್ಷ್ಯತನದಿಂದ ಕಳ್ಳತನ ಮಾಡುತ್ತಿದ್ದು, ಇದೀಗ ಇಲ್ಲಿನ ಜಿಲ್ಲಾಧಿಕಾರಿಗಳ ನಿವಾಸದ ಉದ್ಯಾನವನದಲ್ಲಿದ್ದ ಶ್ರೀಗಂಧ ಮರಗಳನ್ನು ಕಳವು ಮಾಡಲು ಕಳ್ಳರು ವಿಫಲ ಯತ್ನ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿಂದಲೇ ಶ್ರೀಗಂಧ ಮರ ಕಳ್ಳತನವಾದರೆ ಉಳಿದ ಕಡೆಗಳಲ್ಲಿ ಬಿಡುತ್ತಾರಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

Ad

ಚಾಮರಾಜನಗರದ ನ್ಯಾಯಾಲಯ ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ವಸತಿ ಗೃಹದ ಉದ್ಯಾನವನದಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುವ ಯತ್ನ ನಡೆದಿದ್ದು, ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್ ಐ ಆರ್ ದಾಖಲು ಮಾಡಲಾಗಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ರವರ ವಸತಿ ಗೃಹದ ಗಾರ್ಡನ್ ನಲ್ಲಿ ಬೆಳೆದಿರುವ 4 ಶ್ರೀಗಂಧದ ಮರಗಳನ್ನು ಕಳೆದ ಏಳೆಂಟು ದಿನಗಳ ಹಿಂದೆ ಕದಿಯಲು ಪ್ರಯತ್ನ ನಡೆಸಿದ್ದಾರೆ.

Ad

ಕಳ್ಳರು ಜಿಲ್ಲಾಧಿಕಾರಿ ಮನೆಯ ಉದ್ಯಾನಕ್ಕೆ ಬಂದು ಶ್ರೀಗಂಧದ ಮರಗಳ ಕಳ್ಳತನಕ್ಕೆ ಯತ್ನ ನಡೆದಿರುವುದು ಸಾರ್ವಜನಿಕರಲ್ಲಿ ಆಂತಕ ಮೂಡಿಸಿದೆ. ಜಿಲ್ಲಾಧಿಕಾರಿಗಳ ನಿವಾಸದಲ್ಲೇ ರಕ್ಷಣೆ ಇಲ್ಲದಿದ್ದ ಮೇಲೆ ಇನ್ನು ಅರಣ್ಯದ ಯಾವುದೋ ಮೂಲೆಯಲ್ಲೋ ಅಥವಾ ಜಮೀನಿನೊಳಗೋ ಶ್ರೀಗಂಧದ ಮರಗಳಿಗೆ ರಕ್ಷಣೆ ಇದೆಯೇ ಎಂದು ಜನ ಕೇಳುತ್ತಿದ್ದಾರೆ.

Ad

4 ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುವ ಯತ್ನ ನಡೆಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ನ.12ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಚಿನ್ನಸ್ವಾಮಿ 17 ವರ್ಷಗಳಿಂದ ಜಿಲ್ಲಾಧಿಕಾರಿಗಳ ವಸತಿ ಗೃಹದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದು, ಮಲ್ಲಿಕಾರ್ಜುನ ಮತ್ತು ರೇವಣ್ಣ ಗಾರ್ಡನ್ ನಿರ್ವಹಣೆ ಮಾಡುತ್ತಿದ್ದಾರೆ.

Ad

ನ.11ರಂದು ಮಧ್ಯಾಹ್ನ ಸುಮಾರು 3 ಗಂಟೆ ಸಮಯಲ್ಲಿ ಗಾರ್ಡನ್ ನಿರ್ವಹಣೆ ಮಾಡುತ್ತಿದ್ದ ಮಲ್ಲಿಕಾರ್ಜುನ ಮತ್ತು ರೇವಣ್ಣ ಚಿನ್ನಸ್ವಾಮಿ ರವರ ಬಳಿಗೆ ಬಂದು ವಸತಿ ಗೃಹದ ಸುತ್ತಮುತ್ತ ಬೆಳೆದಿರುವ 4 ಶ್ರೀಗಂಧದ ಮರಗಳನ್ನು ಯಾರೋ ಕೊಯ್ದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಕೂಡಲೇ ತಾನೂ ಸಹ ಹೋಗಿ ನೋಡಿದೆ. ವಸತಿ ಗೃಹದ ಪಶ್ಚಿಮ ಭಾಗದ ಕಾಂಪೌಂಡ್ ಬಳಿ ಇರುವ 3 ಶ್ರೀಗಂಧದ ಮರಗಳನ್ನು ಸ್ವಲ್ಪ ಸ್ವಲ್ಪ ಕೊಯ್ದಿದ್ದು, ಅಗ್ನಿಯ ಮೂಲೆಯಲ್ಲಿ ಕಾಂಪೌಂಡ್ ಹತ್ತಿರ ಬೆಳೆದಿರುವ 1 ಶ್ರೀಗಂಧದ ಮರವನ್ನು ಸ್ವಲ್ಪ ಕೊಯ್ದು ಅಲ್ಲೇ ಬಿಟ್ಟು ಹೋಗಿದ್ದಾರೆ.

Ad

ಈ ವಿಚಾರವನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಯಿತು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ದೂರು ನೀಡುತ್ತಿದ್ದೇನೆ. ನ.10ರಂದು ರಾತ್ರಿ ಶ್ರೀಗಂಧದ ಮರಗಳ ಕಳ್ಳತನಕ್ಕೆ ಯತ್ನ ನಡೆದಿದೆ. ಕಳ್ಳರ ಪತ್ತೆಗೆ ಕಾನೂನು ಕ್ರಮ ಜರುಗಿಸಲು ಕೋರಿದ್ದಾರೆ.

Ad
Ad
Ad
Nk Channel Final 21 09 2023