Bengaluru 21°C
Ad

ಚಾಮರಾಜನಗರದಲ್ಲಿ ಜಿಂಕೆ ಮಾಂಸ ಸಾಗಿಸುತ್ತಿದ್ದವರ ಬಂಧನ

ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಐದು ಮಂದಿಯನ್ನು ಗುಂಡ್ಲುಪೇಟೆ ಬಫರ್ ಜೋನ್ ವಲಯದ ಅರಣ್ಯಾಧಿಕಾರಿಗಳು ಬಂಧಿಸಿ, ಮಾಂಸ, ಮೂರು ಬೈಕ್, ಬಂದೂಕು ಮತ್ತು ಕತ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಗುಂಡ್ಲುಪೇಟೆ: ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಐದು ಮಂದಿಯನ್ನು ಗುಂಡ್ಲುಪೇಟೆ ಬಫರ್ ಜೋನ್ ವಲಯದ ಅರಣ್ಯಾಧಿಕಾರಿಗಳು ಬಂಧಿಸಿ, ಮಾಂಸ, ಮೂರು ಬೈಕ್, ಬಂದೂಕು ಮತ್ತು ಕತ್ತಿಯನ್ನು ವಶಕ್ಕೆ ಪಡೆಯಲಾಗಿದೆ.

Ad

ತಾಲೂಕಿನ ಅಣ್ಣೂರುಕೇರಿ ಗ್ರಾಮದ ರವಿ, ಸಿದ್ದಶೆಟ್ಟಿ, ಸಿದ್ದರಾಜು, ಮಹೇಶ ಹಾಗೂ ಪಂಜನಹಳ್ಳಿ ವ್ಯಾಪ್ತಿಯ ಡೋಂಗ್ರಿ ಗೆರೆಷಿಯ ಕಾಲೋನಿಯ ಸುರೇಶ ಬಂಧಿತ ಆರೋಪಿಗಳು. ಇವರು ಜಿಂಕೆಯನ್ನು ಬೇಟೆಯಾಡಿ ಸುಮಾರು 40 ಕೆಜಿ ಮಾಂಸವನ್ನು ಮೂರು ಬೈಕ್ ಗಳಲ್ಲಿ ಸಾಗಿಸುವ ಸಲುವಾಗಿ ಶಿವಪುರ ಗುಂಡ್ಲುಪೇಟೆ ಮಾರ್ಗದ ಕಲ್ಲುಕಟ್ಟೆ ಡ್ಯಾಂ ಬಳಿ ತೆರಳುತ್ತಿದ್ದರು.

Ad

ಈ ವೇಳೆ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳು ಮೂರು ಬೈಕ್ ನಲ್ಲಿ ಬರುತ್ತಿದ್ದವರ ಮೇಲೆ ಅನುಮಾನ ಬಂದು ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಸುಮಾರು 40 ಕೆ.ಜಿ. ಜಿಂಕೆ ಮಾಂಸ, ನಾಡ ಬಂದೂಕು, ಕತ್ತಿ ಇರುವುದು ಕಂಡು ಬಂದಿದೆ. ಕೂಡಲೇ ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ  ಆರೋಪಿತರು ಕಡಬೂರು- ಚಿರಕನಹಳ್ಳಿ ಗ್ರಾಮದ ಬಳಿಯ ಕೆರೆಯ ಸಮೀಪ ಜಿಂಕೆಯನ್ನು ಬಂದೂಕಿನಿಂದ ಬೇಟೆಯಾಡಿ ಮಾಂಸವನ್ನು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

Ad

ಗುಂಡ್ಲುಪೇಟೆ ಬಫರ್ ವಲಯದಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಂತರ ಜಿಂಕೆಯ ಮಾಂಸವನ್ನು ನಿಯಮಾನ ಸಾರ ವಿಲೇ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

Ad

ಬಂಡೀಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಿರ್ದೇಶಕ ಎಸ್ ಪ್ರಭಾಕರನ್ ರವರ ಮಾರ್ಗದರ್ಶನದಲ್ಲಿ  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ಸುರೇಶ್ ಅವರ  ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗುಂಡ್ಲುಪೇಟೆ ಬಫರ್‌ ಜೋನ್ ವಲಯದ ವಲಯ ಅರಣ್ಯಾಧಿಕಾರಿ  ಕೆ.ಪಿ ಸತೀಶ್‌ಕುಮಾರ್,

Ad

ಉಪ ವಲಯ ಅರಣ್ಯಾಧಿಕಾರಿ  ಶಿವಕುಮಾರ್ ಆರ್, ವಿಶೇಷ ಹುಲಿ ಸಂರಕ್ಷಣಾ ದಳದ ಉಪ ವಲಯ ಅರಣ್ಯಾಧಿಕಾರಿ   ಕಿರಣ್‌ ಕುಮಾ‌ರ್ ಬಿ.ಎಸ್, ಕಾರ್ತಿಕ್ ಸುರಪುರ್, ಶ್ರೀಪಾಲ್, ರಮೇಶ ಎಸ್ ಮಠಪತಿ, ಶ್ರೀ ಮಹೇಶ ಎನ್ ಹಾಗೂ ಗುಂಡ್ಲುಪೇಟೆ ಬಫ‌ರ್ ಜೋನ್ ವಲಯದ ಸಿಬ್ಬಂದಿ ಮತ್ತು ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಭಾಗವಹಿಸಿದ್ದರು.

Ad
Ad
Ad
Nk Channel Final 21 09 2023