ಗುಂಡ್ಲುಪೇಟೆ: ತಾಲ್ಲೂಕಿನ ವಿವಿಧ ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಬರುವ ಅಮಾಯಕರನ್ನು ಗುರಿಯಾಗಿಸಿಕೊಂಡು ಹಣ ಡ್ರಾ ಮಾಡಿಕೊಡುವುದಾಗಿ ಹೇಳಿ ನಕಲಿ ಎಟಿಎಂ ಕಾರ್ಡ್ ನೀಡಿ ಪಿನ್ ನಂಬರ್ ಪಡೆದು ಅವರ ಖಾತೆಯಲ್ಲಿರುವ ಹಣವನ್ನು ಬೇರೆ, ಬೇರೆ ಎಟಿಎಂ ಕೇಂದ್ರದಲ್ಲಿ ಡ್ರಾ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮಡಹಳ್ಳಿ ಗ್ರಾಮದ ನಿವಾಸಿ ಲೋಕೇಶ್ ಬಂಧಿತ ಆರೋಪಿ. ಈತ ಕಳೆದ ವಾರ ತಾಲ್ಲೂಕಿನ ವಡ್ಡನಹೊಸಹಳ್ಳಿ ಗ್ರಾಮದ ದಾಸಶೆಟ್ಟಿ ಎಂಬುವರ ಎಟಿಎಂ ಕಾರ್ಡ್ ಪಡೆದು ಬಳಿಕ ಅವರಿಗೆ ನಕಲಿ ಕಾರ್ಡ್ ನೀಡಿ ಬೇರೆ ಎಟಿಎಂ ಕೇಂದ್ರದಲ್ಲಿ ಆರು ಬಾರಿ 50 ಸಾವಿರ ರೂ. ಡ್ರಾ ಮಾಡಿದ್ದು ಕಂಡು ಬಂದಿತ್ತು.
ಸರ್ಕಲ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ ಮಾರ್ಗ ದರ್ಶನದಲ್ಲಿ ಸಬ್‌ಇನ್ಸ್‌ಪೆಕ್ಟರ್ ಸಾಹೇಬ ಗೌಡ, ಕೈಂ ಪಿಎಸ್‌ಐ ಜಯರಾಮ್, ಎಎಸ್‌ಐ ಮಹೇಶ್, ಪೇದೆಗಳಾದ ಮಂಜುನಾಥ್, ಚಿನ್ನಸ್ವಾಮಿ, ಬಸವ ರಾಜೇಂದ್ರ, ಶಂಭುಲಿಂಗಸ್ವಾಮಿ, ಸುಬ್ರಹಣ್ಯ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.