ಮಣಿಪಾಲ: ಕ್ಯಾನ್ಸರ್ ಜಾಗೃತಿ 3ಡಿ ಕಲಾಕೃತಿ ಅನಾವರಣ ಮತ್ತು ಮಾಹಿತಿ ಕಾರ್ಯಕ್ರಮ ವಿಶ್ವ ಕ್ಯಾನ್ಸರ್ ದಿನ-2025 ರ ಅಂಗವಾಗಿ ಸೆಂಟರ್ ಫಾರ್ ಕಮ್ಯುನಿಟಿ ಅಂಕೋಲಜಿ , ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.
ಕ್ಯಾನ್ಸರ್ ಜಾಗೃತಿ 3ಡಿ ಕಲಾಕೃತಿಯನ್ನು ಕೆ ಎಮ್ ಸಿ ಯ ಡೀನ್ ಡಾ ಪದ್ಮರಾಜ್ ಹೆಗ್ಡೆ ಮತ್ತು ಕಸ್ಥೂರ್ಭಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಅವಿನಾಶ್ ಶೆಟ್ಟಿಯವರು ಜಂಟಿಯಾಗಿ ಕೆ ಎಮ್ ಸಿ ಯ ಇಂಟರಾಕ್ಟ್ ಆವರಣದಲ್ಲಿ ಅನಾವರಣಗೊಳಿಸಿದರು.
ಕಾರ್ಯಕ್ರದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ ಅಶ್ವಿನಿಕುಮಾರ್ ಉಪಸ್ಥಿತರಿದ್ದರು. ಸಮುದಾಯ ವೈದ್ಯಕೀಯ ವಿಭಾಗದ ಆಡಿಷನಲ್ ಪ್ರೋಫೆಸರ್ ಮತ್ತು ಸೆಂಟರ್ ಫಾರ್ ಕಮ್ಯುನಿಟಿ ಅಂಕೋಲಜಿಯ ಕೋ-ಆರ್ಡಿನೇಟರ್, ಡಾ.ರಂಜಿತಾ ಶೆಟ್ಟಿಯವರು ವಿಶ್ವ ಕ್ಯಾನ್ಸರ್ ದಿನ-2025 ರ ಥೀಮ್ “ಯುನೈಟೆಡ್ ಫಾರ್ ಯುನಿಕ್” ನ ಬಗ್ಗೆ ವಿವರಿಸಿ, ಸಂಸ್ಥೆಯು ಯಾವ ರೀತಿ ಕ್ಯಾನ್ಸರ್ ಪತ್ತೆ ಹಚ್ಚಲು ಮತ್ತು ನಿವಾರಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂಬುದನ್ನು ವಿವರಿಸಿದರು. ಕ್ಯಾನ್ಸರ್ ಜಾಗೃತಿ 3ಡಿ ಕಲಾಕೃತಿಯನ್ನು ಶ್ರೀನಾಥ್ ಮಣಿಪಾಲ್ ಮತ್ತು ರವಿಹಿರೆಬೆಟ್ಟು ರಚಿಸಿದ್ದರು.