Ad

ನೆಚ್ಚಿನ ಶಿಕ್ಷಕನ ವರ್ಗಾವಣೆ ವೇಳೆ ಕಣ್ಣೀರಿಟ್ಟ ವಿದ್ಯಾರ್ಥಿಗಳು

ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರೊಬ್ಬರು ವರ್ಗಾವಣೆಯಾದ ಕಾರಣ ಮಕ್ಕಳು ಬಿಕ್ಕಿ, ಬಿಕ್ಕಿ ಅತ್ತ ಪ್ರಸಂಗ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ ನಡೆದಿದೆ.

ಬೀದರ್‌: ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರೊಬ್ಬರು ವರ್ಗಾವಣೆಯಾದ ಕಾರಣ ಮಕ್ಕಳು ಬಿಕ್ಕಿ, ಬಿಕ್ಕಿ ಅತ್ತ ಪ್ರಸಂಗ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ ನಡೆದಿದೆ.

2013ರಿಂದ ಕೌಡಗಾಂವ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಗೋಪಾಲ್ ರೆಡ್ಡಿ ಅವರು ಬೀದರ್ ತಾಲೂಕಿನ ಬಗದಲ್ ಸರ್ಕಾರಿ ಪ್ರೌಢ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.

ಶಾಲೆಯಲ್ಲಿ ಆಯೋಜಿಸಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನೆಚ್ಚಿನ ಶಿಕ್ಷಕ ಬೇರೆಡೆಗೆ ಹೋಗುತ್ತಿರುವುದರಿಂದ ಬೇಸರಗೊಂಡು ವಿದ್ಯಾರ್ಥಿಗಳು ಭಾವುಕರಾಗಿ ಒಲ್ಲದ ಮನಸ್ಸಿನಿಂದ ಕಳಿಸಿಕೊಟ್ಟರು. “ದಯವಿಟ್ಟು, ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗ್ಬೇಡಿ ಸರ್” ಎಂದು ಮಕ್ಕಳು ಅಳುತ್ತಾ ತಬ್ಬಿಕೊಂಡರು.

Ad
Ad
Nk Channel Final 21 09 2023