Bengaluru 20°C
Ad

ಶ್ರೀ ಸದ್ಗುರು ಹರಿನಾಥ ಮಹಾರಾಜ್ ಜಾತ್ರಾ ಮಹೋತ್ಸವ: ಕರಪತ್ರ ಬಿಡುಗಡೆ

ಶ್ರೀ ಸದ್ಗುರು ಹರಿನಾಥ ಮಹಾರಾಜ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಮಹಾರಾಷ್ಟ್ರ ಕರ್ನಾಟಕ ಆಂಧ್ರ ಪ್ರದೇಶ್ ತೆಲಂಗಾಣ ಗಡಿಭಾಗದ ಪಂಢರಪುರ ಎಂದೇ ಕರೆಯಲಾಗುತ್ತಿರುವ ಹೊಳೆಸಮುದ್ರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮೂರು ದಿನ ಜಾತ್ರೆ ಜರುಗಲಿದೆ.

ಬೀದರ್: ಶ್ರೀ ಸದ್ಗುರು ಹರಿನಾಥ ಮಹಾರಾಜ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಮಹಾರಾಷ್ಟ್ರ ಕರ್ನಾಟಕ ಆಂಧ್ರ ಪ್ರದೇಶ್ ತೆಲಂಗಾಣ ಗಡಿಭಾಗದ ಪಂಢರಪುರ ಎಂದೇ ಕರೆಯಲಾಗುತ್ತಿರುವ ಹೊಳೆಸಮುದ್ರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮೂರು ದಿನ ಜಾತ್ರೆ ಜರುಗಲಿದೆ.

Ad

ಕಮಲನಗರ ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ನವೆಂಬರ 14ರಿಂದ16ರವರೆಗೆ ಮಹಾ ತಪಸ್ವಿ ಶ್ರೀ ಸದ್ಗುರು ಹರಿನಾಥ ಮಹಾರಾಜ ಜಾತ್ರಾ ಮಹೋತ್ಸವು ಈ ವರ್ಷವೂ ಸಂಭ್ರಮದಿಂದ ಆಚರಿಸಲಾಗುತ್ತಿದೆ.

Ad

ಹಿಂದು ಮುಸ್ಲಿಂ ಸೀಖ್ ಸರ್ವಧರ್ಮೀಯರ ಆರಾಧನಾ ಸ್ಥಳವಾಗಿರುವ ಜಾತ್ರೆಯು ವರ್ಷದಲ್ಲಿ ಎರಡು ಬಾರಿ (ಆಷಾಢ ಮತ್ತು ಕಾರ್ತಿಕ)ನಡೆಯುತ್ತದೆ ನಿಮಿತ್ತವಾಗಿ ಕಾರ್ತಿಕ ಹುಣ್ಣಿಮೆಯ ದಿನ ಜಾತ್ರೆ ವೈಭವದಿಂದ ಆಚರಿಸಲಾಗುತ್ತದೆ.

Ad

ದಿನಾಂಕ 14ರಂದು ಗುರುವಾರ ಚಾಲನೆ ನೀಡುವುದರೊಂದಿಗೆ 10ರಿಂದ 4 ಗಂಟೆಯವರೆಗೆ ರಾತ್ರಿ 9:00 ರಿಂದ 11ರವರೆಗೆ ಗಿನ್ನಿಸ್ ದಾಖಲೆ ಯಾಗಿರುವ ಹದಿನಾರು ವರ್ಷದ ಕುಮಾರಿ ಸೃಷ್ಟಿ ಜಗತಾಪ ಉಪಸ್ಥಿತಿಯಲ್ಲಿ ಬಾಲ ಆನಂದ ಉತ್ಸಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಸಂಜೆ 6ಗಂಟೆಗೆ ಸಾಮೂಹಿಕ ಆರತಿ ಮಾಡಲಾಗುತ್ತದೆ ಇದೆ ದಿನ ರಾತ್ರಿ ಪ್ರಸಿದ್ಧ ಬಾಲ ಕೀರ್ತನಕಾರ ಕುಮಾರಿ ದೀಪಾಲಿ ಖೀಳೆ ಇವರನಡೆಯಲ್ಲಿದೆ. ಕೀರ್ತನೆ ಕಾರ್ಯಕ್ರಮ ನಂತರ ಗೊಂದಳಿ ಕಾರ್ಯಕ್ರಮವನ್ನು ಜರುಗುತ್ತವೆ.

Ad

ಮರುದಿನ 15ರಂದು ಶುಕ್ರವಾರ ಬೆಳಿಗ್ಗೆ 4ಗಂಟೆಗೆ ಅಭಿಷೇಕ ಮಹಾಪೂಜೆಯ ಮೂಲಕ ಚಾಲನೆ ದೊರೆಯಲಿದೆ. ದಿನವಿಡಿ ಮಹಾಪೂಜೆ 10ಗಂಟೆಯಿಂದ 4ರವರೆಗೆ ಸಾಮಾಜಿಕವಾಗಿ ರಕ್ತದಾನ ಶಿಬಿರ ನಡೆಸಲಾಗುತ್ತದೆ ನಡೆಯುವುದರೊಂದಿಗೆ ಪೂಜೆಗಳನ್ನು ನೆರವೇರುತ್ತದೆ.4ರಿಂದ 6ಗಂಟೆಯ ವರೆಗೆ ಗೊಂದಳಿ ಕಾರ್ಯಕ್ರಮವನ್ನು ಜರುಗುತ್ತವೆ.ನಂತರ 6ಗಂಟೆಗೆ ಸಾಮೂಹಿಕ ಮಾಹಾಆರತಿ ನಡೆಯಲಿದೆ. ರಾತ್ರಿ ಶ್ರೀ ಹ.ಭ.ಪ.ಎಕನಾಥ ಮಹಾರಾಜ ಹಂಡೆ ಇವರಿಂದ 9-ರಿಂದ12ರವರಗೆ ಹರಿ ಕೀರ್ತನೆ ಕಾರ್ಯಕ್ರಮ ನಡೆಯುತ್ತದೆ.

Ad

ಶನಿವಾರ ಬೆಳಿಗ್ಗೆ ದಿನಾಂಕ 16ರಂದು ಶ್ರೀ ಸದ್ಗುರು ಹರಿನಾಥ ಮಂದಿರದಿಂದ ದೇವರ ಪಲ್ಲಕಿ ಸಂಕಲ ವಾದ್ಯ ಮೆರವಣಿಗೆ ಭಜನೆಮೇಳಯೊಂದಿಗೆ ನೆರವೆರಲಿದ್ದು,ಪ್ರಮುಖ ಬಿದಿಗಳ ಮೂಲಕ ಭಕ್ತರ ಜಯ ಘೊಷ ಗಳೊಂದಿಗೆ ಸಡಗರ ಸಂಭ್ರಮದಿಂದ ರಾಮ ಮಂದಿರಕ್ಕೆ ಆಗಮಿಸುತ್ತಾರೆ. ಬೆಳಗ್ಗೆ 7ರಿಂದ 12 ಗಂಟೆವರೆಗೆ ರಾಮ್ ಮಂದಿರದ ಎದುರುಗಡೆ ಬಾಂರುಡ ನಡೆಯುತ್ತವೆ.

Ad

ಈ ಜಾತ್ರೆಯ ಉತ್ಸವ ನಿಮಿತ್ಯ ಭಕ್ತಾದಿಗಳಿಂದ ಚಹಾ ನಾಷ್ಟಾ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಈ ಮೂರು ದಿನದ ಕಾರ್ಯಕ್ರಮದಲ್ಲಿ ಅನ್ನದಾಸೋಹ ಊರಿನ ಭಕ್ತರಾದ ಭ್ಯಾಗಲಕ್ಷೀ ಸೇವಾ ಸಮಿತಿ ಹೈದರಾಬಾದ್, ಕು ಶ್ವೇತಾ ಅನೀಲ ಶಿಂಧೆ, ಹುಗ್ಗೆ ಮನೆತನದ ಹೆಣ್ಣು ಮಕ್ಕಳಿಂದ ಹಾಗೂ ಸ್ವಾಮಿ ಸರ್ಮಥ ಪುಣೆ ಹೊಳೆಸಮುದ್ರಕರ ಮತ್ತು ಶಿವಾಜಿ ಸಂಗ್ರಾಮ ಕಲೂರೆ ಸೇವೆಯ ಉಪಸ್ಥಿತಿಯಲ್ಲಿ ನಡೆಯಲ್ಲಿದೆ.

Ad

ಈ ಜಾತ್ರೆಯ ನಿಮಿತ್ಯ ಸಂಸ್ಥೆ ಕಮಿಟಿಯ ಅಧ್ಯಕ್ಷರು ಪದಾಧಿಕಾರಿಗಳು ಊರಿನ ನವಯುವಕ ಮಂಡಲ,ಭಜನೆ ಮಂಡಲ ಮಹಿಳಾಮಂಡಲ ಅನೇಕ ಸಾಮಾಜಿಕ ಸಂಘ ಸಂಸ್ಥೆಗಳ ಸ್ವಾಗತ ಕೊರುತಿರುವರೆಂದು ದೇವಸ್ಥಾನದ ಪೂಜಾರಿ ಶ್ರೀ ಪ್ರವೀಣ್ ಮಹಾರಾಜ ಕದಂ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.

Ad
Ad
Ad
Nk Channel Final 21 09 2023