Ad

ಮುಸ್ಲಿಂ ಮತಗಳಿಂದ ಸಾಗರ್ ಖಂಡ್ರೆಗೆ ಗೆಲುವು : ಜಮೀರ್ ಅಹಮ್ಮದ್ ಖಾನ್

ಸಾಗರ್ ಖಂಡ್ರೆ ಗೆಲುವು ಸಾಧಿಸಿದ್ದು ಮುಸ್ಲಿಂ ಮತಗಳಿಂದ ಎಂದು ವೇದಿಕೆ ಮೇಲೆ ಬಹಿರಂಗವಾಗಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ‌.

ಬೀದರ್: ಸಾಗರ್ ಖಂಡ್ರೆ ಗೆಲುವು ಸಾಧಿಸಿದ್ದು ಮುಸ್ಲಿಂ ಮತಗಳಿಂದ ಎಂದು ವೇದಿಕೆ ಮೇಲೆ ಬಹಿರಂಗವಾಗಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ‌.

Ad
300x250 2

ಬೀದರ್ ನ ಪಾಟೀಲ್ ಫಂಕ್ಷನ್ ಹಾಲ್ ನಲ್ಲಿ ನಡೆದ ವಕ್ಫ್ ಅದಾಲತ್ ಕಾರ್ಯಕ್ರಮದಲ್ಲಿ ಮೃತರ ಅಂತ್ಯ ಸಂಸ್ಕಾರಕ್ಕೆ ಖಬರಸ್ತಾನ್ ಇಲ್ಲಾ. ಹಿಂದಿನಿಂದಲೂ ಅರಣ್ಯ ಪ್ರದೇಶದ ಜಮೀನಿನಲ್ಲೇ ಶವ ಸಂಸ್ಕಾರ ಮಾಡುತ್ತಾ ಬಂದಿದ್ದು. ಈಗ ಅವಕಾಶ ಕಲ್ಪಿಸಿ ಎಂದು ವ್ಯಕ್ತಿಯೊಬ್ಬ ಮನವಿ ಪತ್ರ ಸಲ್ಲಿಸಿದರು. ಅರಣ್ಯ ಸಚಿವರು ಪರಿಚಿತರು ಹೀಗಾಗಿ ಈ ಬಗ್ಗೆ ಅವರ ಜೊತೆ ಚರ್ಚೆ ಮಾಡಿ ಪರಿಹಾರ ಮಾಡುತ್ತೇನೆ ಎಂದರು.

ಈ ವೇಳೆ ಸಚಿವ ಈಶ್ವರ್ ಖಂಡ್ರೆ ಮಗ, ನಮ್ಮ ಮುಸ್ಲಿಂ ಮತಗಳಿಂದಲ್ಲೇ ಗೆದ್ದಿರೋದು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಸಚಿವ ಜಮೀರ್ ಹಿಂದೂಗಳ ಕೆಂಗಣ್ಣಿಗೆ ಗುರಿಯಾದರು. ಈ ವಿಷಯ ಈಗಾ ಸಾಮಾಜಿಕ ಜಾಲತಾಣದಲ್ಲಿ ಧರ್ಮದಂಗಲ್ ಗೆ ಕಾರಣವಾಗಿದೆ.

ಸಾಗರ್ ಖಂಡ್ರೆಗೆ ಮುಸ್ಲಿಮರು ಮಾತ್ರ ವೋಟು ಹಾಕಿದ್ದಾರಾ..?, ಹಾಗಾದ್ರೆ ಹಿಂದೂಗಳು ಮತ ಹಾಕಿಲ್ವಾ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಕಿಡಿಕಾರಿದ್ದಾರೆ. ಈ ಜಿಹಾದಿಗಳಿಂದ ಕರ್ನಾಟಕವನ್ನು ಆ ದೇವರೇ ಕಾಪಾಡಬೇಕು ಎಂದು ಎಕ್ಸ್‌ ಮೂಲಕ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ‌‌‌‌‌.

Ad
Ad
Nk Channel Final 21 09 2023
Ad