Bengaluru 22°C
Ad

ಬೀದರ್ ಕ್ಷೇತ್ರದಲ್ಲಿ ಸತತ ಮುನ್ನಡೆ ಸಾಧಿಸುತ್ತಿರೊ ಸಾಗರ್ ಖಂಡ್ರೆ

Sagar

ಬೀದರ್:​ ಕಲ್ಯಾಣ ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ ಬೀದರ್​ ಕೂಡ ಒಂದು. ಹಲವು ಕಾರಣಗಳಿಗೆ ಬೀದರ್ ಈ ಬಾರಿ ಗಮನ ಸೆಳೆದಿದೆ. ಹಾಲಿ ಸಂಸದ, ಕೇಂದ್ರ ಸಚಿವ ಭಗವಂತ್​ ಖೂಬಾ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಅವರಿಗೆ ಕಾಂಗ್ರೆಸ್​ ಹುರಿಯಾಳಾದ 26 ವರ್ಷದ ಯುವಕ ಸಾಗರ್​ ಖಂಡ್ರೆ ದೇಶದ ಅತಿ ಕಿರಿಯ ಅಭ್ಯರ್ಥಿ ಸವಾಲು ಎಸೆದಿದ್ದಾರೆ.

ಸಾಗರ್​ ಖಂಡ್ರೆ ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿರುವ ಈಶ್ವರ್​ ಖಂಡ್ರೆ ಅವರ ಪುತ್ರ. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಜೊತೆಗೆ ತಂದೆ ಈಶ್ವರ್​ ಖಂಡ್ರೆ ಅವರ ಆಶೀರ್ವಾದ ಮತ್ತು ಬಲವಿದೆ. ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ಸಾಗರ್​ ಖಂಡ್ರೆಗೆ ಇದು ಚೊಚ್ಚಲ ಲೋಕಸಭಾ ಚುನಾವಣೆಯಾಗಿದೆ. ಇನ್ನು ಬೀದರ್ ಕ್ಷೇತ್ರದಲ್ಲಿ ಸಾಗರ್ ಖಂಡ್ರೆ ಸತತ ಮುನ್ನಡೆ ಸಾಧಿಸುತ್ತಿದ್ದಾರೆ. ಸಾಗರ್ ಖಂಡ್ರೆ (ಕಾಂಗ್ರೆಸ್)- 252357 ಮತ ಈಗ ಪಡೆದಿದ್ದು ಭಗವಂತ ಖೂಬಾ (ಬಿಜೆಪಿ) 193667 ಮತ ಪಡೆದುಕೊಂಡಿದ್ದಾರೆ. ಈ ಮೂಲಕ 58690 ಮತಗಳ ಅಂತರದಲ್ಲಿದ್ದಾರೆ ಸಾಗರ್​ ಖಂಡ್ರೆ.

ಇನ್ನು ಭಗವಂತ್​ ಖೂಬಾ ಅವರು 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿ ‘ಹ್ಯಾಟ್ರಿಕ್’ ಗುರಿ ಹೊಂದಿದ್ದಾರೆ. ಖೂಬಾ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು, ಬಿಜೆಪಿ ಪಾಳಯದಲ್ಲಿ ಅಸಮಾಧಾನ ಉಂಟಾಗಿತ್ತು. ಆದಾಗ್ಯೂ ಹೈಕಮಾಂಡ್​ ಅವರನ್ನೇ ಕಣಕ್ಕಿಳಿಸಿದೆ.

 

Ad
Ad
Nk Channel Final 21 09 2023
Ad