Bengaluru 28°C
Ad

ಉದ್ಯಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ವಿರೋಧ

ನಗರದ ಮನ್ನಳ್ಳಿ ರಸ್ತೆಯ ಮೈಲೂರು ಕ್ರಾಸ್ ಬಳಿ (ರಾಣಿ ಕಿತ್ತೂರು ಚೆನ್ನಮ್ಮ ಕ್ರಾಸ್ ನಲ್ಲಿ) ಇರುವ ಸಾರ್ವಜನಿಕ ಉದ್ಯಾನದಲ್ಲಿ ಇಂದಿರಾ ಕ್ಯಾಂಟಿನ್ ಕಟ್ಟುತ್ತಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೀದ‌ರ್: ನಗರದ ಮನ್ನಳ್ಳಿ ರಸ್ತೆಯ ಮೈಲೂರು ಕ್ರಾಸ್ ಬಳಿ (ರಾಣಿ ಕಿತ್ತೂರು ಚೆನ್ನಮ್ಮ ಕ್ರಾಸ್ ನಲ್ಲಿ) ಇರುವ ಸಾರ್ವಜನಿಕ ಉದ್ಯಾನದಲ್ಲಿ ಇಂದಿರಾ ಕ್ಯಾಂಟಿನ್ ಕಟ್ಟುತ್ತಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನಗರಸಭೆ ಆಯುಕ್ತರಿಗೆ ಬಡಾವಣೆ ನಿವಾಸಿಗಳು ಮನವಿ ಪತ್ರ ಸಲ್ಲಿಸಿದ್ದು, ಗಾರ್ಡನ್ ನಲ್ಲಿ ಕಟ್ಟಡ ಕಟ್ಟುವುದನ್ನು ಕೂಡಲೇ ನಿಲ್ಲಿಸಬೇಕು. ಗಾರ್ಡನ್ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಜನಹಿತ, ಪರಿಸರ ವಿರೋಧಿ ಹಾಗೂ ನಿಯಮಬಾಹಿರ ಕ್ರಮವಾಗಿದೆ. ಯಾವುದೇ ಕಾರಣಕ್ಕೂ ಗಾರ್ಡನ್ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ.ಕೂಡಲೇ ಇಲ್ಲಿನ ಕಾಮಗಾರಿ ನಿಲ್ಲಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇಂದಿರಾ ಕ್ಯಾಂಟಿನ್ ಗೆ ನಮ್ಮ ವಿರೋಧ ಇಲ್ಲ. ಇದು ಬಡವರಿಗೆ, ಕೂಲಿಕಾರ್ಮಿಕರಿಗೆ ಅನುಕೂಲ ಕಲ್ಪಿಸಲಿದೆ. ಈ ಭಾಗದಲ್ಲಿ ಕ್ಯಾಂಟಿನ್ ಕಟ್ಟುತ್ತಿರುವುದಕ್ಕೆ ನಾವು ಸ್ವಾಗತಿಸುತ್ತೇವೆ. ಆದರೆ

ನಮ್ಮ ಭಾಗದ ಏಕೈಕ ಪ್ರಮುಖ ಗಾರ್ಡನ್ ನಲ್ಲಿ ಈ ಕಟ್ಟಡವನ್ನು ಕಟ್ಟುತ್ತಿರುವುದು ಒಪ್ಪಲಾಗದು. ಉದ್ಯಾನದಲ್ಲಿ ಯಾವುದೇ ಕಟ್ಟಡ ಇರಕೂಡದು ಎಂಬ ನಿಯಮದ ವಿರುದ್ಧ ಇದಾಗಿದೆ. ಜನಹಿತದಿಂದ, ಪರಿಸರ ಸಂರಕ್ಷಣೆ ದೃಷ್ಟಿಯಿಂದ ನಾವು ಇಲ್ಲಿ ಕ್ಯಾಂಟಿನ್ ಕಟ್ಟುವುದಕ್ಕೆ ವಿರೋಧಿಸುತ್ತಿದ್ದು, ಬೇಡಿಕೆಗೆ ಸ್ಪಂದಿಸಿ ಇಲ್ಲಿನ ಕಾಮಗಾರಿ ಕೈಬಿಟ್ಟು ಬೇರೆಡೆ ಕಟ್ಟಿಕೊಳ್ಳಲು ಒತ್ತಾಯಿಸಿದ್ದಾರೆ.

ಈ ಭಾಗದ ಬಡಾವಣೆಯ ಜನರ, ಪ್ರಮುಖರ ಸುದೀರ್ಘ ಅವಧಿ ಹೋರಾಟದ ಬಳಿಕ ಈ ಉದ್ಯಾನ ರಕ್ಷಣೆ ಮಾಡಲಾಗಿದೆ. ಹಿರಿಯರು, ಮಹಿಳೆಯರು ಸೇರಿ ಸ್ಥಳೀಯರಿಗೆ ಬೆಳಿಗ್ಗೆ, ಸಂಜೆ ವಾಯುವಿಹಾರಕ್ಕೆ ಇದು ಪ್ರಶಸ್ತ ಸ್ಥಳವಾಗಿದೆ.

ಇಲ್ಲಿ ಗಿಡ, ಸಸಿ ನೆಟ್ಟು, ಒಪನ್ ಜಿಮ್, ವಾಕಿಂಗ್ ಪಾಥ್ ನಿರ್ಮಿಸಿ

ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಬೇಕು.

ಇದಕ್ಕಾಗಿ ನಾವೆಲ್ಲರೂ ಪ್ರಯತ್ನ ಮಾಡುತ್ತಿರುವಾಗ ಇಲ್ಲಿ ಇಂದಿರಾ ಕ್ಯಾಂಟಿನ್ ಕಟ್ಟಡ ಕಟ್ಟುತ್ತಿರುವುದು ಅಚ್ಚರಿ ಮೂಡಿಸಿದೆ. ಉದ್ಯಾನದ ಒಂದು ಭಾಗದಲ್ಲಿ ಈಗಾಗಲೇ ದೊಡ್ಡ ನೀರಿನ ಓವರ್ ಹೆಡ್ ಟ್ಯಾಂಕ್ ಕಟ್ಟಲಾಗಿದೆ. ಇದು ಉದ್ಯಾನದ ಶೇ.25ರಷ್ಟು ಜಾಗ ಪಡೆದಿದೆ. ಇನ್ನುಳಿದ ಜಾಗದಲ್ಲಿ ಉದ್ಯಾನ ಅಭಿವೃದ್ಧಿಪಡಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಆದರೆ ಇರುವ ಅಲ್ಪ ಜಾಗದಲ್ಲೇ ಇಂದಿರಾ ಕ್ಯಾಂಟಿನ್ ಕಟ್ಟಿದರೆ ಹೇಗೆ? ಉದ್ಯಾನದದಲ್ಲಿ ಕಟ್ಟಡ ಕಟ್ಟುತ್ತಾ ಹೋದರೆ ಉದ್ಯಾನ ಉಳಿಯಲು ಹೇಗೆ ಸಾಧ್ಯ? ಈ ವಿಷಯ ಗಂಭೀರವಾಗಿ ಪರಿಗಣಿಸಿ ಇಲ್ಲಿನ ಕ್ಯಾಂಟಿನ್ ಕಟ್ಟಡ ಕೆಲಸ ನಿಲ್ಲಿಸಬೇಕು. ನಮ್ಮ ಬೇಡಿಕೆ ನ್ಯಾಯಸಮ್ಮತವಿದೆ. ಬೇಡಿಕೆಗೆ ತಾವು ಸಕಾರಾತ್ಮಕ ಸ್ಪಂದಿಸದಿದ್ದರೆ ನ್ಯಾಯಾಲಯದ ಸಮರ ಆರಂಭಿಸುವ ಜೊತೆಗೆ ಪರಿಸರ ವಿರೋಧಿ ಆಡಳಿತದ ವಿರುದ್ಧ ಬೀದಿಗಿಳಿದು ಹೋರಾಟ ಸಹ ಮಾಡುವುದು ಅನಿವಾರ್ಯ ಎಂದು ಈ ಎಚ್ಚರಿಸಿದ್ದಾರೆ.

ಸ್ಥಳೀಯರ ದೂರಿನ ಬೆನ್ನಲ್ಲೇ ನಗರಸಭೆ ಆಯುಕ್ತ ಶಿವರಾಜ ರಾಠೋಡ್ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ಬಡಾವಣೆ ಪ್ರಮುಖರ ಜೊತೆ ಚರ್ಚಿಸಿದರು. ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಪಪ್ಪು ವಿಶ್ವಕರ್ಮ, ರೇವಣಸಿದ್ದಪ್ಪ ಜಲಾದೆ, ಬಸವರಾಜ ಮಲ್ಕಪ್ಪ, ಶಿವಕುಮಾರ ಭಾಲ್ಕೆ ಇತರರು ಗಾರ್ಡನ್ ಜಾಗದಲ್ಲಿ ಕ್ಯಾಂಟಿನ್ ನಿರ್ಮಾಣಕ್ಕೆ ಅವಕಾಶ ಕೊಡಲ್ಲ ಎಂದು ಹೇಳಿದರು. ಗಾರ್ಡನ್ ಒಳಗೆ ಕ್ಯಾಂಟಿನ್ ಕಟ್ಟಲ್ಲ. ಬದಲಾಗಿ ಬಿವಿಬಿ ಕಾಲೇಜು ರಸ್ತೆಯ ಕಡೆಗೆ ಮುಖ ಮಾಡಿ ಹೊರಭಾಗದ ಕಡೆ ಇರುವ ಜಾಗ ಬಳಸುತ್ತೇವೆ.

ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ಯಾಂಟಿನ್ ಕಟ್ಟಲಾಗುವುದು. ಇಲ್ಲಿನ ಉದ್ಯಾನದಲ್ಲಿ ಹೈಮಾಸ್ಟ್ ದೀಪ ಅಳವಡಿಕೆ, ವಾಕಿಂಗ್ ಪಾಥ್ ನಿರ್ಮಾಣ, ಸಸಿ ನೆಡುವಿಕೆ ಸೇರಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಪೂರಕವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು. ಈ ಬಗ್ಗೆ ಬಡಾವಣೆ ಪ್ರಮುಖರು ಮತ್ತೊಮ್ಮೆ ಚರ್ಚಿಸಿ, ಸ್ಥಳೀಯ ಶಾಸಕರ ಜೊತೆಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಬೇಡಿಕೆ ಸಂಬಂಧದ ಮನವಿ ಪತ್ರದ ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗೂ ಕಳಿಸಲಾಗಿದೆ. ಪ್ರಮುಖರಾದ ಶಶಿಧರ ಹೊಸಳ್ಳಿ, ಪಪ್ಪು ವಿಶ್ವಕರ್ಮ, ರೇವಣಸಿದ್ದಪ್ಪ ಜಲಾದೆ, ಓಂಕಾರ ಎಂ., ಶಶಿಕಾಂತ ಕುಲಕರ್ಣಿ, ಹಮೀದ್ ಪಾಷಾ, ರಫೀಕ್ ಪಾಷಾ, ಸದಾನಂದ ಜೋಶಿ, ಶಶಿಕುಮಾ‌ರ್ ಪಾಟೀಲ್, ಮಾರುತಿ ಸೋನಾ‌ರ್ ,ಯಾಸಿನ್ ಸಾಬ್, ಮೀರ್ ಜುನೈದ್ ಅಲಿ, ಸಮೀ, ಆಸಿಫ್, ರಮೇಶ ಪಿ., ಅಮರನಾಥ ಕಣಜಿಕರ, ಆನಂದ ಪಾಟೀಲ್‌, ಗೋಪಾಲ ರೆಡ್ಡಿ, ಪ್ರಭಾಕರ ಕುಲಕರ್ಣಿ, ಸುನೀಲ ವಂಗೆಪಲ್ಲಿ, ಚಂದ್ರಶೇಖರ ತಾಂಡೂರೆ ಇತರರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಸ್ಥಳಕ್ಕೆ ನಗಸಭೆ ಆಯುಕ್ತ ಭೇಟಿ
ಸ್ಥಳೀಯರ ದೂರಿನ ಬೆನ್ನಲ್ಲೇ ನಗರಸಭೆ ಆಯುಕ್ತ ಶಿವರಾಜ ರಾಠೋಡ್ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ಬಡಾವಣೆ ಪ್ರಮುಖರ ಜೊತೆ ಚರ್ಚಿಸಿದರು. ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಪಪ್ಪು ವಿಶ್ವಕರ್ಮ, ರೇವಣಸಿದ್ದಪ್ಪ ಜಲಾದೆ, ಬಸವರಾಜ ಮಲ್ಕಪ್ಪ, ಶಿವಕುಮಾರ ಭಾಲ್ಕೆ ಇತರರು ಗಾರ್ಡನ್ ಜಾಗದಲ್ಲಿ ಕ್ಯಾಂಟಿನ್ ನಿರ್ಮಾಣಕ್ಕೆ ಅವಕಾಶ ಕೊಡಲ್ಲ ಎಂದು ಹೇಳಿದರು. ಗಾರ್ಡನ್ ಒಳಗೆ ಕ್ಯಾಂಟಿನ್ ಕಟ್ಟಲ್ಲ. ಬದಲಾಗಿ ಬಿವಿಬಿ ಕಾಲೇಜು ರಸ್ತೆಯ ಕಡೆಗೆ ಮುಖ ಮಾಡಿ ಹೊರಭಾಗದ ಕಡೆ ಇರುವ ಜಾಗ ಬಳಸುತ್ತೇವೆ.

ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ಯಾಂಟಿನ್ ಕಟ್ಟಲಾಗುವುದು. ಇಲ್ಲಿನ ಉದ್ಯಾನದಲ್ಲಿ ಹೈಮಾಸ್ಟ್ ದೀಪ ಅಳವಡಿಕೆ, ವಾಕಿಂಗ್ ಪಾಥ್ ನಿರ್ಮಾಣ, ಸಸಿ ನೆಡುವಿಕೆ ಸೇರಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಪೂರಕವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು. ಈ ಬಗ್ಗೆ ಬಡಾವಣೆ ಪ್ರಮುಖರು ಮತ್ತೊಮ್ಮೆ ಚರ್ಚಿಸಿ, ಸ್ಥಳೀಯ ಶಾಸಕರ ಜೊತೆಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad