Ad

ಭಾರೀ ಮಳೆಗೆ ಒಡೆದ ಕೆರೆ ದಂಡೆ,ಅಪಾರ ಹಾನಿ: ಸ್ಥಳಕ್ಕೆ ನೂತನ ಸಂಸದ ಸಾಗರ ಖಂಡ್ರೆ ಭೇಟಿ

Sagar

ಬೀದರ್: ಮಳೆ ಅರ್ಭಟಕ್ಕೆ‌ ಬಸವಕಲ್ಯಾಣ ತಾಲೂಕಿನ ಅಟ್ಟೂರ, ಕೋಹಿನೂರ ಬಳಿ ಕೆರೆ ಒಡೆದ ಜಮಿನಿಗೆ ನೀರು ನೂಗ್ಗಿ ಅಪಾರ ಪ್ರಮಾಣದ ಫಲವತ್ತಾದ ಭೂಮಿ ಹಾನಿಯಾಗಿದೆ.

Ad
300x250 2

ಹಾನಿಗೊಳಗಾದ ಪ್ರದೇಶಕ್ಕೆ ಬೀದರ ನೂತನ ಸಂಸದ ಸಾಗರ ಖಂಡ್ರೆ ಅಧಿಕಾರಿಗಳೋಂದಿಗೆ ಭೇಟಿ ಹಾಗೂ‌ ಪರಿಶೀಲನೆ ಮಾಡಿದರು. ಬಸವಕಲ್ಯಾಣ ತಾಲೂಕಿನ ಅಟ್ಟೂರ, ಕೋಹಿನೂರ, ಭೋಸಗಾ ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿರುವ ಕೆರೆ ಒಡೆದು ನೂರಾರು ಎಕರೆ ಜಮೀನಿಗೆ ನುಗ್ಗಿದ ನೀರು ಅಪಾರ ಪ್ರಮಾಣದ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ಫಲವತ್ತಾದ ಭೂಮಿ ಬರಡು ಭೂಮಿಯಾಗಿದೆ.

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲುಕಿನ ಅಟ್ಟೂರ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ಗೆ ಸೇರಿದ ಕೆರೆ ಒಡೆದ ಹಿನ್ನೆಲೆ ಸುತ್ತಮುತ್ತಲಿನ ನೂರಾರು ನೂರಾರು ಎಕ್ಕರೆ ಫಲವತ್ತಾದ ಜಮಿನೀಗೆ ನೀರು ನೂಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನೂತನ ಸಂಸದ ಸಾಗರ ಖಂಡ್ರೆ ಮಾತನಾಡಿ ಕೆರೆ ಒಡೆದು ಸುತ್ತ ಮುತಲಿನ ರೈತರ ಜಮಿನಿಗೆ ನೀರು ನುಗ್ಗಿ ರೈತರ ಪಂಪ್ ಸೆಟ್ ನೀರಲ್ಲಿ ಕೊಚ್ಚಿ ಹೋಗಿ ರೈತರಿಗೆ ‌ನಷ್ಟ ಅನುಭವಿಸುತ್ತಿದ್ದಾರೆ. ಎನ್ ಡಿ ಆರ್ ಎಫ.(ರಾಷ್ಟ್ರೀಯ ವಿಪತ್ತು ನಿರ್ವಹಣಾ ಪರಿಹಾರ ನಿಧಿ) ಅಡಿ ಯಲ್ಲಿ ರೈತರಿಗೆ ಪ್ರತಿ ಎಕರೆಗೆ 37,500 ಪರಿಹಾರ ನೀಡಲಾಗುತ್ತದೆ ತಕ್ಷಣ ವರದಿ ಸರ್ಕಾರಕ್ಕೆ ಸಲ್ಲಿಸಲು ಸಂಸದ ಸಾಗರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಂಸದ ಸಾಗರ ಖಂಡ್ರೆ ಹಾಗೂ ಅಧಿಕಾರಿಗಳ ಮುಂದೆ ರೈತರು ಕೂಡಲೇ ಪರಿಹಾರ ಒದಗಿಸಿ ಕೊಡುವಂತೆ ಕಣ್ಣೀರು ಹಾಕುವ ಮೂಲಕ ಮನವಿ ಮಾಡಿದರು.

Ad
Ad
Nk Channel Final 21 09 2023
Ad