Ad

ಬೀದರ್: ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸ, ಡೆಂಗ್ಯೂ ಆತಂಕ

ಈಗಾಗಲೇ ರಾಜ್ಯಾದ್ಯಂತ ಡೆಂಗ್ಯೂ ಆತಂಕ ಶುರುವಾಗಿದ್ದು, ದಿನೇ ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಬೀದರ್ ಜಿಲ್ಲಾಡಳಿತ ಮಾತ್ರ ಡೆಂಗ್ಯೂಗೆ ಎಚ್ಚೆತ್ತುಕೊಳ್ಳದೇ ದಿವ್ಯ ನಿರ್ಲಕ್ಷ್ಯ ವಹಿಸಿದಂತೆ ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಬೀದರ್: ಈಗಾಗಲೇ ರಾಜ್ಯಾದ್ಯಂತ ಡೆಂಗ್ಯೂ ಆತಂಕ ಶುರುವಾಗಿದ್ದು, ದಿನೇ ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಬೀದರ್ ಜಿಲ್ಲಾಡಳಿತ ಮಾತ್ರ ಡೆಂಗ್ಯೂಗೆ ಎಚ್ಚೆತ್ತುಕೊಳ್ಳದೇ ದಿವ್ಯ ನಿರ್ಲಕ್ಷ್ಯ ವಹಿಸಿದಂತೆ ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

Ad
300x250 2

ನಗರದ ರೈಲ್ವೆ ನಿಲ್ದಾಣದ ಹತ್ತಿರ, ತಳವಾಡೆ ಆಸ್ಪತ್ರೆ ಹತ್ತಿರ ಹಾಗೂ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತಲೇ ನೀರು ನಿಂತಲ್ಲೆ ನಿಲ್ಲುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಹಸಿ ಕಸ ಮತ್ತು ಒಣ ಕಸ ಒಂದೇ ಶೇಖರಣೆ ಆಗ್ತಾ ಇರೋದರಿಂದ ಸೊಳ್ಳೆಗಳ ಅವಾಸ ತಾಣವಾಗಿ ಮಾರ್ಪಡುತ್ತಿವೆ ಸೊಳ್ಳೆಗಳ ಕಾಟದಿಂದ ತಪ್ಪಿಸಲು ಜಿಲ್ಲಾಡಳಿತ ನಗರದಲ್ಲಿ ಫಾಗಿಂಗ್ ಮಾಡುವ ಕೆಲಸ ಮಾಡಬೇಕಿತ್ತು.

ಆದರೆ ಯಾವುದೇ ಕ್ರಮ ಕೈಗೊಂಡಿಲ್ಲಾ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ಈ ಕುರಿತು ನಗರಸಭೆ ಕಮೀಷನರ್‌ಗೆ ಕೇಳಿದರೆ ನಗರದಲ್ಲಿ ಫಾಗಿಂಗ್ ಮಾಡುವ ಕೆಲಸ ನಿರಂತರವಾಗಿದೆ. ಆದರೆ ಸೊಳ್ಳೆಗಳು ನಿಯಂತ್ರಣವಾಗುತ್ತಿಲ್ಲಾ ಹಾಗಾಗಿ ಇನ್ನೊಮ್ಮೆ ಕೆಮಿಕಲ್ ಮಿಶ್ರಿತ ಫಾಗ್ ಅನ್ನು ನಗರದಾದ್ಯಂತ ಸ್ಪ್ರೇ ಮಾಡಲಾಗುವುದು ಎಂದು ನಗರಸಭೆ ಪೌರ ಆಯುಕ್ತ ಶಿವರಾಜ್ ರಾಥೋಡ್ ಹೇಳಿದ್ರು. ಅದ್ರೆ ಇದುವರೆಗೆ ನಗರದಲ್ಲಿ ಫಾಗಿಂಗ್ ಮಾಡಿರೊದನ್ನ ನಾವೂ ನೊಡೆ ಇಲ್ಲಾ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕೆಲಸವನ್ನ ಜಿಲ್ಲಾಡಳಿತ ಮಾಡಲಿ ಎಂದು ಸ್ಥಳೀಯರು ಅಗ್ರಹಿಸಿದರು.

 

Ad
Ad
Nk Channel Final 21 09 2023
Ad