ಔರಾದ್: ತಾಲ್ಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗಿನ ಜಾವ ಮಳೆಯಾಗಿ ಬಿಸಿಲಿನಿಂದ ಬಸವಳಿದ ಜನರಲ್ಲಿ ಕೊಂಚ ನೆಮ್ಮದಿ ತಂದಿದೆ.
Ad
ಔರಾದ್ ಹೋಬಳಿಯಲ್ಲಿ 34.4 ಮಿ.ಮೀ., ಚಿಂತಾಕಿ 12.4 ಮಿ.ಮೀ., ಸಂತಪುರ 10.6 ಮಿ.ಮೀ., ದಾಬಕಾ 4.4 ಮಿ.ಮೀ., ಠಾಣಾಕುಶನೂರ 3.10 ಮಿ.ಮೀ ಮಳೆಯಾಗಿದೆ.ಇದರಿಂದ ಬಿತ್ತನೆ ಸಿದ್ಧತೆಯಲ್ಲಿರುವ ರೈತರಲ್ಲಿ ಆಶಾಭಾವ ಮೂಡಿದೆ.
Ad
ರೈತರಿಗೆ ಸಲಹೆ: ಸೋಯಾ ಬಿತ್ತನೆ ಮಾಡುವ ರೈತರು ಬಹಳ ಕಾಳಜಿ ವಹಿಸಬೇಕಾಗಿದೆ. 70ರಿಂದ 80 ಮಿ.ಮೀ. ಮಳೆಯಾದರೆ ಮಾತ್ರ ಸೋಯಾ ಬಿತ್ತನೆ ಮಾಡಬೇಕು. 4ರಿಂದ 5 ಸೆಂಟಿ ಮೀಟರ್ ಆಳದಲ್ಲಿ ಸೋಯಾ ಬೀಜ ಬಿತ್ತಬೇಕು. ಖರೀದಿ ಮಾಡಿದ ಸೋಯಾ ಬೀಜದ ಚೀಲ ಬೇಕಾಬಿಟ್ಟಿ ಬೀಸಾಡುವುದು ಮಾಡಬಾರದು. ಸೋಯಾಗೆ ಡಿಎಪಿ ಬದಲು ಕಾಂಪ್ಲೆಕ್ಸ್ ಗೊಬ್ಬರ ಬಳಸುವುದರಿಂದ ಉತ್ತಮ ಇಳುವರಿ ಬರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ತಿಳಿಸಿದ್ದಾರೆ.
Ad
Ad