Bengaluru 22°C
Ad

ಶಕ್ತಿ ಯೋಜನೆ : ಬೀದರ್‌ ವಿಭಾಗದಲ್ಲಿ 4 ಕೋಟಿ ಮಹಿಳೆಯರು ಉಚಿತ ಪ್ರಯಾಣ

ಮಹಿಳೆಯರಿಗೂ ಸಾರಿಗೆ ನಿಗಮಗಳಿಗೂ ಶಕ್ತಿ ತುಂಬಿದ ರಾಜ್ಯ ಸರ್ಕಾರದ ಮಹತ್ವದ ಯೋಜನೆ ಶಕ್ತಿ ಯೋಜನೆ. ಕಳೆದ ಒಂದು ವರ್ಷದಿಂದ ಜಾರಿಯಾದ ಯೋಜನೆ ಬೀದರ ಜಿಲ್ಲೆಯಲ್ಲಿ ಬರೋಬರಿ ರಾಜ್ಯ ರಸ್ತೆ ಸಾರಿಗೆ ಬಸ್ ನಲ್ಲಿ 4ಕೋಟಿ‌ ಮಹಿಳೆಯರು ಊಚಿತ ಸಂಚಾರ ಮಾಡಿದ್ದಾರೆ

ಬೀದರ್‌  : ಮಹಿಳೆಯರಿಗೂ ಸಾರಿಗೆ ನಿಗಮಗಳಿಗೂ ಶಕ್ತಿ ತುಂಬಿದ ರಾಜ್ಯ ಸರ್ಕಾರದ ಮಹತ್ವದ ಯೋಜನೆ ಶಕ್ತಿ ಯೋಜನೆ. ಕಳೆದ ಒಂದು ವರ್ಷದಿಂದ ಜಾರಿಯಾದ ಯೋಜನೆ ಬೀದರ ಜಿಲ್ಲೆಯಲ್ಲಿ ಬರೋಬರಿ ರಾಜ್ಯ ರಸ್ತೆ ಸಾರಿಗೆ ಬಸ್ ನಲ್ಲಿ 4ಕೋಟಿ‌ ಮಹಿಳೆಯರು ಊಚಿತ ಸಂಚಾರ ಮಾಡಿದ್ದಾರೆ.

Ad
300x250 2

ಬೀದರ ವಿಭಾಗದಲ್ಲಿ 534 ಬಸ್ ರೂಟ್ ಸಂಚಾರ ವಾಗುತ್ತಿದ್ದು ಶಕ್ತಿ ಯೋಜನೆ ಪ್ರಾರಂಭವಾದ ನಂತರ ವಿಶೇಷವಾಗಿ
ರಾಜ್ಯ ಹಾಗೂ ಅನ್ಯ ರಾಜ್ಯಕ್ಕೆ ಹೆಚ್ಚು ಸಂಚಾರ ಆರಂಭವಾಗಿದ್ದೆ ಗುಡ್ಡಾಪುರ.

ಕೂಡಲಸಂಗಮ. ಶಿವಮೊಗ್ಗ ಬೆಂಗಳೂರು ಸೇರಿದಂತೆ ವಿವಿಧ ಕಡೆ ಒಟ್ಟು 604 ಬಸ ರೂಟ ಪ್ರಾರಂಭ ಮಾಡಲಾಗಿದ್ದು 70 ಬಸ ಹೊಸ ರೂಟ್ ಹೆಚ್ಚು ವರಿಯಾಗಿ ಸೇವೆ ಆರಂಭಿಸಲಾಗಿದ್ದೆ. ಬರೋಬರಿ ಮಹಿಳೆಯರು. ಬಾಲಕಿಯರು ಸೇರಿ ಒಟ್ಟು 4 ಕೋಟ್ಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ಪ್ರತಿನಿತ್ಯ 10.9 ಲಕ್ಷ ಮಹಿಳೆಯರು ಸಂಚಾರ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಗೆ ವರ್ಷಕ್ಕೆ ಬೀದರ ವಿಭಾಗಕ್ಕೆ 11ಕೋಟ್ಟಿ ಆದಾಯ ಹೆಚ್ಚಾಗಿದೆ.

ಪ್ರತಿ ನಿತ್ಯ ಸಾರಿಗೆ ಆದಾಯ 30.06ಲಕ್ಷ ಹೆಚ್ಚಾಗಿದೆ ಮಹಿಳೆಯರಿಗೆ ಸಂಚಾರಕ್ಕೆ ಯಾವುದೆ ಕುಂದು ಕೊರತೆ ಆಗದಂತೆ ಸಂಸ್ಥೆ ಉತ್ತಮ ಸೇವೆ ನೀಡಲಾಗುತ್ತಿದ್ದೆ ಎಂದು ವಿಭಾಗಿಯ‌ ನೀಂತ್ರಣಾಧಿಕಾರಿ ಚಂದ್ರಕಾಂತ ಫೂಲೆಕ ಮಾಹಿತಿ ನೀಡಿದರು

Ad
Ad
Nk Channel Final 21 09 2023
Ad