Bengaluru 23°C
Ad

ಬಕ್ರೀದ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ-ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಯಾವುದೇ ಜಾತಿ, ಧರ್ಮದಲ್ಲಿ ಬರುವ ಹಬ್ಬಗಳನ್ನು ಅವರವರ ಆಚಾರ ವಿಚಾರಕ್ಕೆ ಧಕ್ಕೆ ಬರದಂತೆ ಶಾಂತಿಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ತಿಳಿಸಿದರು.

ಬೀದರ್‌: ಯಾವುದೇ ಜಾತಿ, ಧರ್ಮದಲ್ಲಿ ಬರುವ ಹಬ್ಬಗಳನ್ನು ಅವರವರ ಆಚಾರ ವಿಚಾರಕ್ಕೆ ಧಕ್ಕೆ ಬರದಂತೆ ಶಾಂತಿಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಾಣಿದಯಾ ಸಂಘ ಹಾಗೂ ಬಕ್ರೀದ ಹಬ್ಬದ ಆಚರಣೆ ನಿಮಿತ್ಯ ಪ್ರಾಣಿಗಳ ಸಾಗಾಣಿಕೆ ಮತ್ತು ವಧೆಯನ್ನು ತಡೆಗಟ್ಟುವ ಕುರಿತು ಮುಂಜಾಗ್ರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದ ನಿಯಮಾವಳಿಯಂತೆ ಆಕಳು, ಆಳ ಕರು, ಎತ್ತು ಮತ್ತು ಒಂಟೆಗಳನ್ನು ವಧೆ ಮಾಡುವಂತಿಲ್ಲ. 13 ವರ್ಷ ಮೇಲ್ಪಟ್ಟಂತೆ ಎಮ್ಮೆ, ಕೋಣಗಳನ್ನು ಪಶು ಸಂಗೋಪನಾ ಇಲಾಖೆ ವೈದ್ಯಾಧಿಕಾರಿಗಳ ದೃಢೀಕರಣ ಪಡೆದು ವಧೆ ಮಾಡಬೇಕು, ಕಸಾಯಿ ಖಾನೆಗಳಲ್ಲಿ ವಧೆ ಮಾಡಿದ ನಂತರ ಪ್ರಾಣಿಗಳ ಅವಶೇಷಗಳನ್ನು ನಗರಸಭೆಯಿಂದ ಪ್ಲಾಸ್ಟಿಕ್ ಚಿಲದಲ್ಲಿ ತುಂಬಿ ನಿಗದಿಪಡಿಸಿದ ಸ್ಥಳದಲ್ಲಿ ಗುಂಡಿ ತೋಡಿ ಮುಚ್ಚಲು ಕ್ರಮವಹಿಸಬೇಕೆಂದು ನಗರ ಸಭೆ ಅಯುಕ್ತರಿಗೆ ಸೂಚಿಸಿದರು ಹಾಗೂ ಎಲ್ಲಾ ತಾಲ್ಲೂಕು ಮುಖ್ಯಾಧಿಕಾರಿಗಳೊಂದಿಗೆ ಪಶುಸಂಗೋಪನೆ ಇಲಾಖೆ ವೈದ್ಯಾಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆದ ಜಾಗೃತಿ ವಹಿಸಬೇಕು. ಜಿಲ್ಲೆಯಲ್ಲಿರುವ 50ಕ್ಕೂ ಹೆಚ್ಚಿರುವ ಪ್ರಾಣಿಗಳಿರುವ ಗೋಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಚನ್ನಬಸವಣ್ಣ ಎಸ್.ಎಲ್. ಅವರು ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಜಾನುವಾರು ಸಾಗಾಣಿಕೆ ಕುರಿತು ವನಮಾರಪಳ್ಳಿ, ಕಮಲನಗರ ಬಾರ್ಡರಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಸಿ.ಸಿ.ಟಿವಿ ಕ್ಯಾಮರಾಗಳನ್ನು ಅಳವಡಿಸಿ ನಿಗಾ ವಹಿಸಬೇಕೆಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಅದೇ ರೀತಿಯಾಗಿ ರಸ್ತೆಗಳಲ್ಲಿ ಒಡಾಡುವ ಬಿಡಾಡಿ ಧನಗಳನ್ನು ಹಿಡಿದು ಅವುಗಳನ್ನು ಕಿವಿಯೋಲೆಗಳನ್ನು ಹಾಕಿ ಗುರುತಿಸಿ ಗೋಶಾಲೆಗಳಿಗೆ ಬಿಡುವ ಕ್ರಮ ವಹಿಸಬೇಕು. ಬಕ್ರೀದ ಹಬ್ಬದ ಮುಂಚೆ ಬರುವ ಖಾನಾಪೂರ ಮತ್ತು ಔರಾದ ಸಂತೆಗಳನ್ನು (ಜಾತ್ರೆ) ಜಾಗ್ರತೆ ವಹಿಸಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ಎಲ್ಲಾ ತಾಲ್ಲೂಕುಗಳಲ್ಲಿ ಪ್ರಾಣಿಸಾಗಣೆ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿರೀಶ ಬದೋಲೆ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ನರಸಪ್ಪ, ನಗರಸಭೆ ಆಯುಕ್ತರಾದ ರಾಠೋಡ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮುರಗೇಂದ್ರ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪಶುವೈದ್ಯಾಧಿಕಾರಿಗಳು, ಜಿಲ್ಲೆಯಲ್ಲಿರುವ ಗೋಶಾಲೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad