Ad

ಕರ್ತವ್ಯ ನಿರತ ಶಿರಸ್ತೇದಾರ್ ಗೆ ಕಚೇರಿಯಲ್ಲೇ ಚೂರಿ ಇರಿತ

Knif

ಬೀದರ್ : ಕರ್ತವ್ಯ ನಿರತ ಶಿರಸ್ತೇದಾರ್ ಮೇಲೆ ವ್ಯಕ್ತಿಯೊಬ್ಬ ಕಚೇರಿಯಲ್ಲೇ ಚಾಕು ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಗುರುವಾರ ನಡೆದಿದೆ. ಬೀದರ್ ತಹಶೀಲ್ದಾರ್ ಕಚೇರಿಯಲ್ಲೇ ಹಾಡಹಗಲಲ್ಲೇ ಘಟನೆ ನಡೆದಿದ್ದು, ಆಹಾರ ಶಾಖೆಯ ಅನಿಲ್ ಕುಮಾರ್ ಮೇಲೆ ಮರಣಾಂತಿಕ ಹಲ್ಲೆ ಮಾಡಿ ದುಷ್ಕರ್ಮಿ ಪರಾರಿಯಾಗಿದ್ದಾನೆ.

Ad
300x250 2

ಘಟನೆ ಬಳಿಕ ಕಚೇರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿ ವಿಲೇವಾರಿ ಆಗದ ಹಿನ್ನಲೆ‌ ಕೋಪಗೊಂಡು ದುಷ್ಕೃತ್ಯ ನಡೆಸಿದ್ದಾನೆ‌ ಎನ್ನಲಾಗಿದೆ. ಗಾಯಾಳು ಅನಿಲ್ ಕುಮಾರ ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಹಶೀಲ್ದಾರ್ ಅವರು ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Ad
Ad
Nk Channel Final 21 09 2023
Ad