Bengaluru 23°C
Ad

ಬೀದರ್: ಕಾರಾಗೃಹದಲ್ಲಿ ಕೈದಿಗಳ ಉಚಿತ ಆರೋಗ್ಯ ತಪಾಸಣೆ

ಅಸೋಸಿಯೇಷನ್ ಆಫ್ ಅಲೈನ್ಸ್ ಕ್ಲಬ್ ಇಂಟರ್‌ ನ್ಯಾಷನಲ್ ಬೀದರ್ ಘಟಕದ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಉಚಿತ ಆರೋಗ್ಯ ಹಾಗೂ ರಕ್ತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಬೀದರ್: ಅಸೋಸಿಯೇಷನ್ ಆಫ್ ಅಲೈನ್ಸ್ ಕ್ಲಬ್ ಇಂಟರ್‌ ನ್ಯಾಷನಲ್ ಬೀದರ್ ಘಟಕದ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಉಚಿತ ಆರೋಗ್ಯ ಹಾಗೂ ರಕ್ತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಕ್ಲಬ್ ಕಾರ್ಯದರ್ಶಿ ಡಾ. ಶರಣಯ್ಯ ಸ್ವಾಮಿ ಹಾಗೂ ಡಾ. ನೇಹಾ ಫಾತಿಮಾ ಅವರು ಪುರುಷ, ಮಹಿಳಾ ಕೈದಿಗಳು ಹಾಗೂ ಜೈಲು ಸಿಬ್ಬಂದಿ ಸೇರಿ ಒಟ್ಟು 186 ಜನರ ಆರೋಗ್ಯ ತಪಾಸಣೆ ಮಾಡಿದರು.

ಕ್ಲಬ್‍ನ ಜಿಲ್ಲಾ ಗವರ್ನರ್ ಬಸವರಾಜ ಹೇಡೆ ಮಾತನಾಡಿ, ‘ಕೈದಿಗಳಿಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ನೆರವಾಗಲು ಹಾಗೂ ಅವರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಬರುವ ದಿನಗಳಲ್ಲಿ ದಂತ, ನೇತ್ರ ಹಾಗೂ ಚರ್ಮರೋಗ ತಪಾಸಣೆ ಶಿಬಿರ ಸಹ ಹಮ್ಮಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಜೈಲು ಸೂಪರಿಂಟೆಂಡೆಂಟ್‌ ದತ್ತಾತ್ರಿ ಆರ್. ಮೇಧಾ ಮಾತನಾಡಿ, ‘ಅಸೋಸಿಯೇಷನ್ ಆಫ್ ಅಲೈನ್ಸ್ ಕ್ಲಬ್ ಇಂಟರ್‌ ನ್ಯಾಷನಲ್ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿ ರುವುದು ಶ್ಲಾಘನೀಯ’ ಎಂದರು.

ಜೇಲರ್‌ಗಳಾದ ಸಿದ್ಧನಗೌಡ ಪಾಟೀಲ, ಟಿ.ಬಿ. ಭಜಂತ್ರಿ, ಕ್ಲಬ್‍ನ ನವೀನಕುಮಾರ, ಎಂಜೆಲ್, ಶೀತಲ್, ನಿಶಾ ಗುತ್ತೇದಾರ್, ಸ್ನೇಹಾ, ದಿವ್ಯಕಿರಣ ಮತ್ತಿತರರು ಹಾಜರಿದ್ದರು.

Ad
Ad
Nk Channel Final 21 09 2023
Ad