Ad

ನಾಳೆ ವಸತಿ, ವಕ್ಪ್ ಬೋರ್ಡ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರ ಬೀದರ ಜಿಲ್ಲಾ ಪ್ರವಾಸ ಕಾರ್ಯಕ್ರಮ

ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಜೂನ್.23 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುತ್ತಾರೆ.‌

ಬೀದರ್: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಜೂನ್.23 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುತ್ತಾರೆ.‌

Ad
300x250 2

ಜೂನ್ 23 ರಂದು ಸಂಜೆ 4:30 ಕಲಬುರಗಿಯಿಂದ ನಿರ್ಗಮಿಸಿ ಸಂಜೆ 6:00 ಗಂಟೆಗೆ ಬೀದರ ಜಿಲ್ಲೆಯ ಬಸವಕಲ್ಯಾಣಕ್ಕೆ ಆಗಮಿಸಿ ಎ.ಎಂ.ಜಿ.ಕನ್ಸ್ಸ್ಟೆಕ್ಷನ್ ಕಛೇರಿ ಉದ್ಘಾಟನೆ ಮಾಡಲಿದ್ದಾರೆ.

ಸಂಜೆ 7:00 ರಿಂದ 8:00 ಗಂಟೆಯವರೆಗೆ ಬೀದರನ ಹೈದರಾಬಾದ್ ರಸ್ತೆಯ ನೂರ್ ಕಾಲೇಜ್‌ನ ಶ್ರೀ ಅಯ್ಯಾಜ್ ಖಾನ್ ಅವರ ನಿವಾಸಕ್ಕೆ ಸೌಜನ್ಯದ ಭೇಟಿ ನೀಡಿ ನಂತರ ಬೀದರ ರಸ್ತೆ ಮೂಲಕ ಕಲಬುರಗಿಗೆ ಪ್ರಯಾಣಿಸಿ ವಾಸ್ತವ್ಯ ಮಾಡಲಿದ್ದಾರೆ.

ಜೂನ್.24 ರಂದು ಬೆಳಿಗ್ಗೆ 9:30 ಗಂಟೆಗೆ ಕಲಬುರಗಿ ರಸ್ತೆ ಮಾರ್ಗವಾಗಿ ಬೆಳಿಗ್ಗೆ 11:00 ಗಂಟೆಗೆ ಬೀದರಗೆ ಆಗಮಿಸಿ ವಕ್ಫ್ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನಂತರ ಬೀದರ್ ರಸ್ತೆ ಮಾರ್ಗವಾಗಿ ಕಲಬುರಗಿಗೆ ಪ್ರಯಾಣಿಸಿ ವಾಸ್ತವ್ಯ ಮಾಡುವವರು. ನಂತರ ಜೂನ್.25 ರಂದು ಬೆಳಿಗ್ಗೆ 8:30 ಗಂಟೆಗೆ ಕಲಬುರಗಿ ರಸ್ತೆ ಮಾರ್ಗವಾಗಿ ಬೆಳಿಗ್ಗೆ 10:00 ಗಂಟೆಗೆ ಬೀದರಗೆ ಆಗಮಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಭೇಟಿ ಹಾಗೂ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾಮಗಾರಿಗಳ ವೀಕ್ಷಣೆ ಮಾಡಲಿದ್ದಾರೆ. ‌

ನಂತರ ಬೆಳಿಗ್ಗೆ 11:00 ಗಂಟೆಗೆ ಬೀದರನ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಅದಾಲತ್ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಸೀಲ್ದಾರಗಳು ಹಾಗೂ ಡಿಡಿಎಲ್‌ಆರ್/ಎಡಿಎಲ್‌ಆರ್ ಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಎಸ್.ಸರ್ಫರಾಜ್‌ಖಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad