Ad

ಭಾರತೀಯ ಜನತಾ ಪಾರ್ಟಿ ಪ್ರತಿಯೊಂದಕ್ಕೂ ರಾಜಕೀಯ : ಸಚಿವ ಈಶ್ವರ ಖಂಡ್ರೆ

ಇಡಿಯಿಂದ ಬಿ.ನಾಗೇಂದ್ರ ಮನೆ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಬೀದರ್ ನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.

ಬೀದರ್: ಇಡಿಯಿಂದ ಬಿ.ನಾಗೇಂದ್ರ ಮನೆ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಬೀದರ್ ನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.

Ad
300x250 2

ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಭ್ರಷ್ಟಾಚಾರವನ್ನ ಸರಕಾರ ತನಿಖೆ ಮಾಡುತ್ತಿದೆ. ರಾಜ್ಯ ಸರಕಾರ ರಚಿಸಿದ ತನಿಖಾ ತಂಡ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದೆ. ಆರೋಪಗಳನ್ನು ಪತ್ತೆ ಹಚ್ಚಿದ್ದಾರೆ ಕಾನೂನು ಪ್ರಕಾರ ಅವರ‌ ಮೇಲೆ ಕಾನೂನು ಕ್ರಮವಾಗಲಿದೆ. ಅದಕ್ಕೆ ರಾಜಕೀಯ ಕಲರ್ ಕೊಡುವ ಅವಶ್ಯಕತೆಯಿಲ್ಲಾ ಎಂದು ಸಚಿವ‌ ಈಶ್ವರ ಖಂಡ್ರೆ ಹೇಳಿದರು.

ಭಾರತೀಯ ಜನತಾ ಪಾರ್ಟಿಯವರು ಪ್ರತಿಯೊಂದಕ್ಕೂ ರಾಜಕೀಯ ಮಾಡುತ್ತಾರೆ. ನಾವು ಅದಕ್ಕೆ ರಾಜಕೀಯ ಬೆರೆಸೋ ಕೆಲಸವನ್ನ ಕಾಂಗ್ರೆಸ್ ಪಕ್ಷ ಮಾಡೋದಿಲ್ಲಾ. ರಾಮನಗರ ಹೆಸರು ಪದಲಾವಣೆ ಮಾಡುತ್ತಿರುವುದಕ್ಕೆ ರಾಮನ ಹೆಸರು ತಳುಕು ಹಾಕಿರುವ ವಿಚಾರ.

ಬಿಜೆಯವರು ಜಾತಿ ಜಾತಿಗಳಲ್ಲಿ ಧರ್ಮ ಧರ್ಮದ ನಡುವೆ ಒಡೆದಾಳುವ ನೀತಿಯನ್ನ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ರಾಮ್ ರಹೀಂ ಎಲ್ಲರೂ ಒಂದೆ ಎಂದು ಕಾಂಗ್ರೆಸ್ ಪಕ್ಷ ನಂಬಿಕೊಂಡಿದೆ. ರಾಮನಗರ ಹೆಸರನ್ನು ಬದಲಾವಣೆ ಮಾಡುವುದರ ಬಗ್ಗೆ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿ ವಿಚಾರ ಮಾಡುತ್ತಾರೆ ಬೀದರ್ ನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

Ad
Ad
Nk Channel Final 21 09 2023
Ad