Bengaluru 27°C
Ad

ಭಗವಂತ ಖೂಬಾ vs ಸಾಗರ್ ಖಂಡ್ರೆ; ಬೀದರ್​​ನಲ್ಲಿ ಗೆಲ್ಲೋದ್ಯಾರು?

Bhagwant Khooba Vs Sagar Khandre

ಬೀದರ್:‌ ಲೋಕಸಭಾ ಚುನಾವಣೆ 2024ರ ಫಲಿತಾಂಶ ಇಂದು ಪ್ರಕಟವಾಗಲಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಫಲಿತಾಂಶ ಈಗ ಗಮನ ಸೆಳೆದಿದೆ. ಮಧ್ಯಾಹ್ನದ ವೇಳೆದ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ.

Ad

ಕಲ್ಯಾಣ ಕರ್ನಾಟಕದ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಬೀದರ್ ಹಲವು ಕಾರಣಗಳಿಂದ ಈ ಬಾರಿ ಗಮನ ಸೆಳೆಯುತ್ತಿದ್ದು ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಇದೆ.

Ad

ಕೇಂದ್ರ ಸಚಿವ ಭಗವಂತ ಖೂಬಾ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು, ಕಾಂಗ್ರೆಸ್‌ನಿಂದ ಸಚಿವ ಈಶ್ವರ್ ಖಂಡ್ರೆ ಪುತ್ರ 26 ವರ್ಷದ ಸಾಗರ್ ಖಂಡ್ರೆ ಸ್ಪರ್ಧೆ ಮಾಡಿದ್ದಾರೆ.

Ad

2014 ಮತ್ತು 2019ರ ಚುನಾವಣೆಯಲ್ಲಿ ಗೆದ್ದಿರುವ ಭಗವಂತ ಖೂಬಾ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದರೆ. ಯುವಕ ಸಾಗರ್ ಖಂಡ್ರೆ ಮೊದಲ ಬಾರಿಗೆ ಸಂಸತ್ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ.

Ad

ಬೀದರ್ ಕ್ಷೇತ್ರ ಪರಿಚಯ

Ad

ಬೀದರ್ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ, ಆಳಂದ, ಬೀದರ್ ಜಿಲ್ಲೆಯ ಬಸವಕಲ್ಯಾಣ, ಹುಮ್ನಾಬಾದ್, ಬೀದರ್ ದಕ್ಷಿಣ, ಭಾಲ್ಕಿ ಮತ್ತು ಔರಾದ್ ಕ್ಷೇತ್ರಗಳು ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

Ad

ಈ 8 ಕ್ಷೇತ್ರಗಳಲ್ಲಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದರೆ, ಉಳಿದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಬಿಜೆಪಿ ಹೆಚ್ಚಿನ ಶಾಸಕರ ಬಲ ಹೊಂದಿರುವ ಕಾರಣ, ಕಾಂಗ್ರೆಸ್‌ಗೆ ಪೈಪೋಟಿ ಕೊಡುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

Ad
Ad
Ad
Nk Channel Final 21 09 2023