Ad

ಶಿಕ್ಷಕನಿಂದ ವಿದ್ಯಾರ್ಥಿಗೆ ಥಳಿತ : ಶಾಲೆಗೆ ಭೇಟಿ ನೀಡಿದ ಮಕ್ಕಳ ರಕ್ಷಣಾ ಆಯೋಗ

ಅರಣ್ಯ ಸಚಿವ ಈಶ್ವರ ಖಂಡ್ರೆ ತವರು ಕ್ಷೇತ್ರದಲ್ಲೆ ಖಾಸಗಿ ಶಾಲೆಯ ಶಿಕ್ಷಕನೋರ್ವ 8 ನೇ ತರಗತಿ ವಿದ್ಯಾರ್ಥಿ ಮೇಲೆ ಮನಸೊ ಇಚ್ಚೆ ಥಳಿಸಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಕ್ಕಳ ಆಯೋಗ, ವೀರಭದ್ರೇಶ್ವರ ಖಾಸಗಿ ಶಾಲೆಗೆ ಭೇಟಿ ನೀಡಿ, ಕ್ರೂರಿ ಶಿಕ್ಷಕನ ವಿರುದ್ದ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

ಬೀದರ್ : ಅರಣ್ಯ ಸಚಿವ ಈಶ್ವರ ಖಂಡ್ರೆ ತವರು ಕ್ಷೇತ್ರದಲ್ಲೆ ಖಾಸಗಿ ಶಾಲೆಯ ಶಿಕ್ಷಕನೋರ್ವ 8 ನೇ ತರಗತಿ ವಿದ್ಯಾರ್ಥಿ ಮೇಲೆ ಮನಸೊ ಇಚ್ಚೆ ಥಳಿಸಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಕ್ಕಳ ಆಯೋಗ, ವೀರಭದ್ರೇಶ್ವರ ಖಾಸಗಿ ಶಾಲೆಗೆ ಭೇಟಿ ನೀಡಿ, ಕ್ರೂರಿ ಶಿಕ್ಷಕನ ವಿರುದ್ದ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

Ad
300x250 2

ಎಸ್ ಖಾಸಗಿ ಶಾಲೆಯ ಶಿಕ್ಷಕನೋರ್ವ 8 ನೇ ತರಗತಿ ವಿದ್ಯಾರ್ಥಿ ಮೇಲೆ ಮನಸೋ ಇಚ್ಚೆ ಥಳಿಸಿ ಮೈ ಎಲ್ಲಾ ಬಾಸುಂಡೆ ಬರುವ ಹಾಗೆ ಹಲ್ಲೆ ನಡೆಸಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯರು ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದ ವೀರಭದ್ರೇಶ್ವರ ಖಾಸಗಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದ ಖಾಸಗಿ ಶಾಲೆ ವೀರಭದ್ರೇಶ್ವರ ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿದ್ದ ಕ್ರೂರಿ ಶಿಕ್ಷಕ ಜೈಶಂಕರ್ 8 ನೇ ತರಗತಿ ವಿದ್ಯಾರ್ಥಿ ವಿಶ್ವಜೀತ್ ಮೇಲೆ ಮನಸೋ ಇಚ್ಚೆ ಥಳಿಸಿದ ಪರಿಣಾಮ ವಿದ್ಯಾರ್ಥಿಯ ಬೆನ್ನು, ಕಾಲು ತೊಡೆ ಸೇರಿದಂತೆ ದೇಹದ ಕೆಲವೆಡೆ ಬಾಸುಂಡೆ ಬಂದಿದ್ದು, ವಿದ್ಯಾರ್ಥಿ ಪೋಷಕರು ನ್ಯಾಯಕ್ಕಾಗಿ ಧನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ಕುರಿತು ವಿದ್ಯಾರ್ಥಿ ತಂದೆ ಸಂತೋಷ ಶಿಕ್ಷಕನ ವಿರುದ್ದ ಅಸಮಧಾನ ಹೊರಹಾಕಿದ್ದು, ಚಿಕ್ಕ ಮಗುವಿನ ಮೇಲೆ ಮೃಗಿಯ ವರ್ತನೆ ತೋರಿರುವ ಶಿಕ್ಷಕನಿಗೆ ಶಿಕ್ಷೆ ನೀಡಿ ಮುಂದೆ ಮತ್ತೊಂದು ಮಗುವಿನ ಮೇಲೆ ಈ ರೀತಿ ಹಲ್ಲೆಯಾಗದಂತೆ ಶಿಕ್ಷಣ ಇಲಾಖೆ ಹಾಗೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹಲವು ವರ್ಷಗಳಂದ ನಿಟ್ಟೂರು ಗ್ರಾಮದಲ್ಲಿ 1-10 ನೇ ತರಗತಿವರೆಗೆ ಶಾಲೆ ನಡೆಸುತ್ತಿರುವ ವೀರಭದ್ರೇಶ್ವರ ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ಜೈ ಶಂಕರ್ ಬೋಧನೆ ಮಾಡುತ್ತಿದ್ದು, ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿರುವುದು ಇದೆ ಮೊದಲೆನಲ್ಲಾ ಎನ್ನಲಾಗಿದೆ. ವಿದ್ಯಾರ್ಥಿಯ ಪೋಷಕರು ಹೇಳಿದಂತೆ ಇದೇ ರೀತಿ ಮುರ್ನಾಲ್ಕು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾ. ಆದ್ರೆ ಪ್ರಕರಣಗಳು ವೀರಭದ್ರೇಶ್ವರ ಶಾಲೆಯ ಶಿಕ್ಷಕರ ಒತ್ತಡದಿಂದ ಬೆಳಕಿಗೆ ಬಂದಿರಲಿಲ್ಲಾ. ಶಾಲೆಯ ಶಿಕ್ಷಕರು ಎಲ್ಲದಕ್ಕೂ ಒತ್ತಾಯ ಮಾಡುತ್ತಿದ್ದು, ಅದೇ ಸಂಸ್ಥೆಯ ಪುಸ್ತಕ ಹಾಗೂ ಅವರದ್ದೇ ವಾಹನಗಳನ್ನ ಬಳಸದೇ ಇರುವ ವಿದ್ಯಾರ್ಥಿಗಳ ಟಾರ್ಗೆಟ್ ಮಾಡಿ ಹಲ್ಲೆ ಮಾಡ್ತಾರೆ ಅಂತಾ ಆರೋಪಿಸಿದ್ದಾರೆ.

ಈಗ ನಮ್ಮ ಮಗ ವಿಸ್ವಜೀತ್ ಮೇಲೆ ಹಲ್ಲೆಗೂ ಅದೇ ಕಾರಣ. ವಿಶ್ವಜೀತ್ ಪ್ರತಿನಿತ್ಯ ಸರ್ಕಾರಿ ಬಸ್‌ನಲ್ಲೆ ಶಾಲೆಗೆ ಹೋಗುತ್ತಿದ್ದ. ಹಾಗಾಗಿ ನಮ್ಮ ಬಸ್‌ನಲ್ಲಿ ಬಾ ಎಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ರು. ಇನ್ನು ಘಟನೆ ಕುರಿತು ಮಕ್ಕಳ ಆಯೋಗದ ಸದಸ್ಯ ಶಶಿಧರ್ ಕೋಸಂಭೆ ಮಾತನಾಡಿದ್ದು, ಇದೊಂದು ಮೃಗೀಯ ವರ್ತನೆ ಆಗಿದ್ದು, ಇಂತಹ ಘಟನೆ ರಾಜ್ಯದಲ್ಲಿ ಬೆಳಕಿಗೆ ಬಂದಿರಲಿಲ್ಲಾ. ಶಿಕ್ಷಕ ಜೈಶಂಕರ್ ಹಾಗೂ ವೀರಭದ್ರೇಶ್ವರ ಶಾಲೆಯ ವಿರುದ್ದ ಶಿಸ್ತು ಕ್ರಮ ಆಗಬೇಕು ಆಗ್ರಹಿಸಿದ್ರು..

ಒಟ್ನಲ್ಲಿ ತಿದ್ದಿ ಬುದ್ದಿ ಹೇಳಬೇಕಾದ ಶಿಕ್ಷಕ ತಮ್ಮ ಹಣದಾಸೆ ಮನಸ್ಥಿತಿಯಿಂದಾಗಿ ಮುಗ್ಧ ವಿದ್ಯಾರ್ಥಿಯ ಮೇಲೆ ಬೇಕಾಬಿಟ್ಟಿ ಹಲ್ಲೆ ನಡೆಸಿದ್ದು, ವಿಷಾದನೀಯ. ಇಂತಹ ಹೇಯ ಘಟನೆಗಳು ಮತ್ತೊಮ್ಮೆ ನಡೆಯದಿರಲಿ ಎಂಬುದು ಸಾರ್ವಜನಿಕರ ಆಶಯ‌.

 

Ad
Ad
Nk Channel Final 21 09 2023
Ad