ಬೀದರ್ : ಇಲ್ಲಿನ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ತನ್ನ 6ನೇ ವರ್ಷ , ಕರ್ನಾಟಕಕ್ಕೆ 50 ಸಂಭ್ರಮ ನಿಮಿತ್ತವಾಗಿ ರಾಜ್ಯ ಮಟ್ಟದ ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿಗಾಗಿ ಅರ್ಜಿಯನ್ನು ಕರೆಯಲಾಗಿತ್ತು.
ವಿದೇಶದಲ್ಲಿ ಕನ್ನಡ ಸೇವೆ ಮಾಡುತ್ತಿರುವ ಶ್ರೀ ಭೀಮ ನಿಲಕಂಠರಾವ ಹಂಗರಗಿ, ಹಿರಿಯ ಜಾನಪದ ಚಿಂತಕರಾಗಿರುವ ಶಂಭುಲಿಂಗ ವಾಲದೊಡ್ಡಿ, ಶಿಕ್ಷಣ ಸೇವಕ ರಾಹುಲ ಜಿ ಮಿಶ್ರಾ, ಬಿಹಾರ, ಅಂತರಾಷ್ಟ್ರೀಯಯ ಕ್ರೀಡಾಪಟು ಲಕ್ಷ್ಮಮ್ಮಾ ಚಿನ್ನಪ್ಪ, ಕೋಲಾರ, ಸಮಾಜ ಸೇವಕ ಸಾದಿಕ್ ಅಹಮದ ಶ್ರೀನಿವಾಸಪೂರ,
ಹಿನ್ನಲೆ ಗಾಯಕ, ವಸಂತ ಬಾರಡ್ಕ ಕಾಸರಗೋಡ, ಯುವ ಸಾಹಿತ್ಯದ ಪ್ರತಿಭೆ, ಮೌನೇಶ ಜಿಕೆ ಕಲಬುರ್ಗಿ, ವೈದ್ಯಕೀಯ, ಸಮಾಜಮುಖಿ ಸೇವೆ ಡಾ.ಸುಜಾತ ಎಲ್ ಹೊಸಮನಿ, ಸಂಘಟನೆ ಸೇವೆ ಶರಣಪ್ಪ ಬರ್ಸಿ, ಸಿಂಧನೂರು, ಬಿದ್ರಿಕಲೆ ರಾಜಕುಮಾರ ಎನ್, ಚಿತ್ರಕಲಾ ಸೇವೆ ಚಂದ್ರಕಾಂತ ಎಲ್ ದರ್ಗಾ,
ಸಂಗೀತ ಸೇವೆ ಶ್ರೀ ಗುಂಡಪ್ಪ ಕಟ್ಟಿ ಮಂಡ್ಯ, ಶ್ರೀಮತಿ ಭಾನುಪ್ರಿಯಾ ಅರಳಿ, ಸಾಹಿತ್ಯ ಸಂಘಟನೆ ಸೇವೆ ಡಾ.ಗವಿಸಿದ್ದಪ್ಪ ಪಾಟೀಲ್ ಕೊಪ್ಪಳ, ಸಮಾಜ ಸೇವೆ ಭೀಮರಡ್ಡಿ ಸಿಂಧನಕೇರಾ, ಕನ್ನಡ ನಾಡು ನುಡಿ ಸಾಹಿತ್ಯ ಸಂಘಟನೆ ಸೇವೆ ಶ್ರೀ ಸುರೇಶ ಚನ್ನಶೆಟ್ಟಿ, ವಿಜಯಕುಮಾರ ಸೋನಾರೆ, ದೇವಿದಾಸ ಚಿಮಕೊಡ, ಶಿಕ್ಷಣ ಸಾಹಿತ್ಯ ಸೇವೆ ಕಸ್ತೂರಿ ಪಟಪಳ್ಳಿ, ರಂಗ ಭೂಮಿ ಕಲೆ ರವಿಕುಮಾರ ಎಸ್ ಸಿಂಘೆ, ಬಾಲ್ಯದ ಪ್ರತಿಭೆ ಕು.ಮಹಿಮಾ ಮೊಗವೀರ ಕುಂದಾಪುರ ಉಡುಪಿ,
ದಲಿತ ಚಳುವಳಿ ಹಾಡುಗಳ ಸೇವೆ ಬಕ್ಕಪ್ಪ ದಂಡಿನ, ಮಾಧ್ಯಮ ಸೇವೆ, ಅಪ್ಪಾರಾವ ಸಾವದಿ, ವಿಜಯಕುಮಾರ ಅಸ್ಟೂರೆ, 2023-24 ನೇ ಸಾಲಿಗೆ ಎಸ್ ಎಸ್ ಎಲ್ ಸಿ ಪಿಯುಸಿ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ಪಾಸಾಗಿರುವ ವರ್ಷಿನಿ ರಾಘವೇಂದ್ರ ಕಲಬುರ್ಗಿ ವಿಕಾಸ ರಾಚಣ್ಣಾ ಅಭಿಶೇಕ ವಿಠ್ಠಲ್,
ಸೌಮ್ಯ ಕಲ್ಲಪ್ಪ. ನವೀನ, ಸಾಯಿನಾಥ, ಶಿವಶಂಕರ್ ಸಂಜಯ ಚಿಕ್ಕಮಗಳೂರು, ಸೃಜನ್ಯ ಅತಿವಾಳೆ, ತೇಜಶ್ವಿನಿ ಕೋಲಾರ, ಶುಭಂ, ಅರ್ಪಿತಾ, ಸಾಹಿತ್ಯ ಪಿ ಜನವಾಡಕರ್, ಜೈಸಿಕಾ ಜೈವಂತ, ಶಿವಾಜಿ ಶೇಖರಪ್ಪ ರಾಣಿಬೆನ್ನೂರು ಅನನ್ಯ, ಸೇರಿದಂತೆ 150 ವಿದ್ಯಾರ್ಥಿಗಳಿಗೆ ಪ್ರತಿಭಾ ಸತ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಪ್ರತಿಭಾ ಸತ್ಕಾರ ರಾಜ್ಯ ಮಟ್ಟದ ಕಾರ್ಯಕ್ರಮವಾಗಿದೆ. ಬೀದರ್ ನಗರದಲ್ಲಿ ನಡೆಯಲಿದೆ. ಕಾರ್ಯಕ್ರಮದ ದಿನಾಂಕ ನಿಗದಿಯಾದ ನಂತರ ಒಂದುವಾರ ಮುಂಚಿತವಾಗಿ ತಿಳಿಸಲಾಗುವುದೆಂದು ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷ ಡಾ.ಸುಬ್ಬಣ್ಣ ಕರಕನಳ್ಳಿ ತಿಳಿಸಿದ್ದಾರೆ.