News Karnataka Kannada
Wednesday, April 24 2024
Cricket
ಬೆಂಗಳೂರು

ಇಂದಿನಿಂದ ಬೆಳ್ಳಿ ತೆರೆಗೆ ಭರ್ಜರಿ ಎಂಟ್ರಿ ಕೊಡಲಿದೆ ʻಯುವʼ ಚಿತ್ರ

ಇಂದಿನಿಂದ ರಾಜ್ಯಾದ್ಯಂತ ʻಯುವʼ ಚಿತ್ರ ಬಿಡುಗಡೆ. ಒಂದು ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗ ಆಸೆ ಇಂದಿನಿಂದ ಈಡೆರಲಿದೆ. ದೊಡ್ಮನೆ ಕುಟುಂಬ ಕುಡಿ ಯುವರಾಜ್‌ ಅವರು ತಮ್ಮ ಚೊಚ್ಚಲ ಸಿನಿಮಾ ʻಯುವʼ ಚಿತ್ರದ ಮೂಲಕ ಭರ್ಜರಿ ಎಂಟ್ರಿ ಕೊಡಲಿದ್ದಾರೆ.
Photo Credit : NewsKarnataka

ಬೆಂಗಳೂರು:  ಇಂದಿನಿಂದ ರಾಜ್ಯಾದ್ಯಂತ ʻಯುವʼ ಚಿತ್ರ ಬಿಡುಗಡೆ. ಒಂದು ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗ ಆಸೆ ಇಂದಿನಿಂದ ಈಡೆರಲಿದೆ. ದೊಡ್ಮನೆ ಕುಟುಂಬ ಕುಡಿ ಯುವರಾಜ್‌ ಅವರು ತಮ್ಮ ಚೊಚ್ಚಲ ಸಿನಿಮಾ ʻಯುವʼ ಚಿತ್ರದ ಮೂಲಕ ಭರ್ಜರಿ ಎಂಟ್ರಿ ಕೊಡಲಿದ್ದಾರೆ.

ರಾಜ್ಯಾದ್ಯಂತ ಸುಮಾರು 350ಕ್ಕೂ ಹೆಚ್ಚು ಥಿಯೇಟರ್​​ಗಳಲ್ಲಿ ಯುವ ಘರ್ಜನೆ ಆರಂಭವಾಗಲಿದ್ದು, ಯುವ ಸಂಭ್ರಮ ಜೋರಾಗಿದೆ.ಯುವ ರಿಲೀಸ್​ ಹಿನ್ನೆಲೆ ಥಿಯೇಟರ್​ಗಳ ಮುಂದೆ ಹಬ್ಬದ ಕಳೆ ಹೆಚ್ಚಿದೆ. ಕೆಜಿ ರಸ್ತೆಯ ನರ್ತಕಿ ಬಳಿ ಅಪ್ಪು ಮತ್ತು ಯುವ ರಾಜ್ ಕುಮಾರ್ ಅವರ 60 ಅಡಿ ಕಟೌಟ್​ ರಾರಾಜಿಸುತ್ತಿದೆ.

ಜೆಪಿ ನಗರದ ಸಿದ್ದೇಶ್ವರದಲ್ಲಂತೂ ದೊಡ್ಡ ಉತ್ಸವವೇ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಷ್ಟೇ ಅಲ್ಲ ಹೊಸಪೇಟೆ, ದಾವಣೆಗೆರೆ, ಹಾಸನ, ಚಾಮರಾಜನಗರ ಸೇರಿ ಬಹುತೇಕ ಎಲ್ಲ ಜಿಲ್ಲೆಗಳು ಯುವನ ಎಂಟ್ರಿಗೆ ಭೆರ್ಜರಿ ಸಿದ್ದತೆ ನಡೆಸಲಾಗಿದೆ.

ಟ್ರೈಲರ್‌ ಮೂಲಕವೇ ಅಭಿಮಾನಿಗಳ ಗಮನ ಸೆಳೆದಿರುವ ಯುವ ಇಂದು ಬೆಳ್ಳಿ ತೆರೆಯ ಮೇಲೆ ಇನ್ನೂ ಸಖತ್‌ ಆಗಿ ಎಂಟ್ರಿ ಕೊಡಲಿದೆ. ಇನ್ನು ಸಿನಿಮಾದ ಹಾಡುಗಳಂತು ಈಗಾಗಲೇ ಮೆಚ್ಚುಗೆ ಪಡೆದಿದೆ.

ಇನ್ನು ಸಂತೋಷ್ ಆನಂದ್ ರಾಮ್ ಡೈರೆಕ್ಷನ್, ಹೊಂಬಾಳೆ ಫಿಲಂಸ್ ಪ್ರೊಡಕ್ಷನ್​ ಚಿತ್ರದ ಕಿಕ್ ಹೆಚ್ಚಿಸಿದೆ. ಸಪ್ತಮಿ ಗೌಡ ನಾಯಕಿಯಾಗಿದ್ದು, ಹೊಸ ಜೋಡಿ ಭರವಸೆ ಮೂಡಿಸಿದೆ. ಇದೆಲ್ಲದರ ಜೊತೆ ಯುವ ರಾಜ್ ಕುಮಾರ್, ಪವರ್​ಸ್ಟಾರ್ ಪುನೀತ್ ರಾಜ್ ಕುಮಾರ್​ ಅವರ ಇನ್ನೊಂದು ರೂಪವಾಗಿ ಕಾಣಿಸಿಕೊಳ್ಳಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು