ಬೆಂಗಳೂರು: ರೀಲ್ಸ್ ಮಾಡಲು ಕೆರೆಗೆ ಹಾರಿದ ಯುವಕ ನಾಪತ್ತೆಯಾದ ಘಟನೆ ನಗರದ ಮಾರತಹಳ್ಳಿಯ ಪಣತ್ತೂರು ಕೆರೆಯಲ್ಲಿ ಇಂದು(ಭಾನುವಾರ) ಸಂಜೆ 4.20 ರ ಸುಮಾರಿಗೆ ನಡೆದಿದೆ.
ರೀಲ್ಸ್ ಮಾಡುವ ಸಲುವಾಗಿ ಮೂರು ಜನ ಸ್ನೇಹಿತರು ಕೆರೆಯ ಬಳಿ ಬಂದಿದ್ದು, ಒಬ್ಬನಿಗೆ ವಿಡಿಯೋ ಮಾಡಲು ಹೇಳಿ ಇಬ್ಬರು ಕೆರೆಗೆ ಹಾರಿದ್ದಾರೆ. ಈ ವೇಳೆ ಈಜಲು ಹೋದ ಇಬ್ಬರಲ್ಲಿ ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಇದೀಗ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ದೌಡಾಯಿಸಿದ್ದಾರೆ.
Ad