ಬೆಂಗಳೂರು: ಅಡುಗೆ ಮಾಡುವಾಗ ಕುಕ್ಕರ್ ಸ್ಫೋಟವಾಗಿ ಯುವಕನೊಬ್ಬ ಮೃತಪಟ್ಟು, ಮತ್ತೊಬ್ಬ ಯುವಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೆನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮೃತ ಹಾಗೂ ಗಾಯಗೊಂಡ ಯುವಕ ಇಬ್ಬರೂ ಉತ್ತರ ಪ್ರದೇಶ ಮೂಲದವರಾಗಿದ್ದಾರೆ.
ಉತ್ತರ ಪ್ರದೇಶ ಮೂಲದ ಮೋಸಿನ್ ಮೃತ. ಸಮೀರ್ ಗಾಯಾಳು. ಜೆ.ಪಿ.ನಗರದ ಆರನೇ ಹಂತದಲ್ಲಿ ಘಟನೆ ನಡೆದಿದ್ದು, ಕುಕ್ಕರ್‌ನ ಪ್ರೆಷರ್ ಹೆಚ್ಚಾಗಿ ಬ್ಲಾಸ್ಟ್ ಆಗಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಬೆನ್ನಲ್ಲೆ ಪುಟ್ಟೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ವಿಕ್ಟೋರಿಯಾ ಸುಟ್ಟಗಾಯ ವಿಭಾಗದಲ್ಲಿ ಸಮೀರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಚಿಕಿತ್ಸೆ ಫಲಿಸದೇ ಮೋಸಿನ್ ಎಂಬಾತ ಮೃತಪಟ್ಟಿದ್ದಾನೆ.
Ad