Bengaluru 23°C
Ad

ಇಂದು ಕರಾವಳಿಯ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ

ಕರ್ನಾಟಕದ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನಲ್ಲಿ ಇಂದಿನಿಂದ ಧಾರಾಕಾರ ಮಳೆ ಸುರಿಯಲಿದ್ದು ರೆಡ್​ ಅಲರ್ಟ್​ ಘೋಷಿಸಲಾಗಿದೆ.

ಬೆಂಗಳೂರು:  ಇಂದು ಕರಾವಳಿಯ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು ಜೂನ್​ 9ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.​

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ತುಮಕೂರಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.​

ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಶಿರಾಲಿಯಲ್ಲಿ 35.6 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಪುತ್ತೂರು, ಶಿರಹಟ್ಟಿ, ಉಪ್ಪಿನಂಗಡಿ, ಗುಂಡ್ಲುಪೇಟೆ, ಗೋಕರ್ಣ, ಚನ್ನಪಟ್ಟಣದಲ್ಲಿ ಮಳೆಯಾಗಿದೆ. ಕುಮಟಾ, ಹರಪನಹಳ್ಳಿ, ಕದ್ರಾ, ಧರ್ಮಸ್ಥಳ, ಮಾಣಿ, ಕಾರವಾರ, ಕುಂದಗೋಳ, ಬೆಳ್ಳಟ್ಟಿ, ಸೋಮವಾರಪೇಟೆ, ಅಂಕೋಲಾ, ಹೊನ್ನಾವರ, ಹಾರಂಗಿ, ಎಚ್​ಡಿ ಕೋಟೆ, ಹುಂಚದಕಟ್ಟೆ, ಕಳಸ, ಬೆಳ್ತಂಗಡಿ, ಸಿದ್ದಾಪುರ, ಸವಣೂರು, ಶಿಗ್ಗಾಂವ್​, ಪೊನ್ನಂಪೇಟೆ, ನಾಪೋಕ್ಲು, ಭಾಗಮಂಡಲ, ಮೈಸೂರಿನಲ್ಲಿ ಮಳೆಯಾಗಿದೆ.

Ad
Ad
Nk Channel Final 21 09 2023
Ad