ಬೆಂಗಳೂರು: ನಗರದ ಪ್ರತಿಷ್ಠಿತ ಮಾಲ್ ನಲ್ಲಿ ವ್ಯಕ್ತಿಯೋರ್ವ ಯುವತಿಯೋರ್ವಳಗೆ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋ ವೈರಲ್ ಆಗಿದೆ. ಅ.29 ಸಂಜೆ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ವೈರಲ್ ಆಗಿರುವ ವಿಡಿಯೋನಲ್ಲಿ ವ್ಯಕ್ತಿಯೋರ್ವ ಬೇಕಂತಲೇ ಯುವತಿಯ ಹಿಂಭಾಗಕ್ಕೆ ಮುಟ್ಟುವ ಮೂಲಕ ಅಸಹ್ಯವಾಗಿ ನಡೆದುಕೊಂಡಿದ್ದಾನೆ. ಈ ಘಟನೆ ನಿಶ್ಚಿತವಾಗಿ ಎಲ್ಲಿ ನಡೆದಿದೆ ಎಂದು ಪತ್ತೆಯಾಗಿಲ್ಲ.
yesh_fitspiration ಎನ್ನುವ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋ ಅಪ್ಲೋಡ್ ಆಗಿದ್ದು, ಈ ಘಟನೆ ನಿನ್ನೆ (ಅ.29) ಸಂಜೆ 6.30ರ ಸುಮಾರಿಗೆ ಬೆಂಗಳೂರಿನ ಲುಲು ಮಾಲ್ನಲ್ಲಿ ನಡೆದಿದೆ. ಗದ್ದಲ ಇರುವ ಕಡೆ ಈ ವ್ಯಕ್ತಿ ಮಹಿಳೆಯರು ಹಾಗೂ ಯುವತಿಯರ ಹಿಂದೆ ಓಡಾಡುತ್ತಿದ್ದ. ಇದನ್ನು ಗಮನಿಸಿ ಆತನನ್ನು ಫಾಲೋ ಮಾಡಿದೆ. ಬಳಿಕ ಈ ಘಟನೆ ಬಗ್ಗೆ ಸೆಕ್ಯೂರಿಟಿ ಗಾರ್ಡ್ ಹಾಗೂ ಮಾಲ್ ಮ್ಯಾನೇಜ್ಮೆಂಟ್ ಗಮನಕ್ಕೆ ತಂದಿದ್ದೇನೆ. ನಂತರ ಆತನನ್ನು ಸೆಕ್ಯೂರಿಟಿ ಗಾರ್ಡ್ ಹುಡುಕಾಡಿದ್ದಾರೆ. ಆದ್ರೆ, ಆ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದ ಎಂದು ಬರೆದುಕೊಂಡಿದ್ದಾರೆ.
https://www.instagram.com/reel/Cy_Q7yvsRla/?hl=en