Bengaluru 27°C
Ad

ರಾಹುಲ್ ಗಾಂಧಿ ಪ್ರತಿಪಕ್ಷ ನಾಯಕ ಆಗಲಿ ಅನ್ನೋದು ನಮ್ಮೆಲ್ಲರ ಬಯಕೆ: ಡಾ.ಜಿ.ಪರಮೇಶ್ವರ್

ರಾಹುಲ್ ಗಾಂಧಿ ದೇಶಾದ್ಯಂತ ಪಾದಯಾತ್ರೆ ಮಾಡಿದ್ದಾರೆ. ಈ ಮೂಲಕ ಜನರ ಜ್ವಲಂತ ಸಮಸ್ಯೆಗಳನ್ನು ಎತ್ತಿದ್ದಾರೆ. ಹೀಗಾಗಿ ಅವರೇ ಪ್ರತಿಪಕ್ಷ ನಾಯಕ ಆಗಲಿ ಅನ್ನೋದು ನಮ್ಮೆಲ್ಲರ ಬಯಕೆಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್  ಹೇಳಿದ್ದಾರೆ.

ಬೆಂಗಳೂರು: ರಾಹುಲ್ ಗಾಂಧಿ ದೇಶಾದ್ಯಂತ ಪಾದಯಾತ್ರೆ ಮಾಡಿದ್ದಾರೆ. ಈ ಮೂಲಕ ಜನರ ಜ್ವಲಂತ ಸಮಸ್ಯೆಗಳನ್ನು ಎತ್ತಿದ್ದಾರೆ. ಹೀಗಾಗಿ ಅವರೇ ಪ್ರತಿಪಕ್ಷ ನಾಯಕ ಆಗಲಿ ಅನ್ನೋದು ನಮ್ಮೆಲ್ಲರ ಬಯಕೆಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್  ಹೇಳಿದ್ದಾರೆ.

Ad

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರೇ ಪ್ರತಿಪಕ್ಷ ಆಗಲಿ ಅಂತ ನಮ್ಮೆಲ್ಲರ ಆಸೆ. ಇದನ್ನು ಇಂಡಿಯಾ ಒಕ್ಕೂಟ ತೀರ್ಮಾನಿಸಲಿದೆ. ಇಂಡಿಯಾ ಕೂಟ ಏನು ತೀರ್ಮಾನ ಮಾಡುತ್ತೋ ನೋಡೋಣ ಎಂದು ಹೇಳಿದರು.

Ad

ಪ್ರತಿಪಕ್ಷ ನಾಯಕನಾಗಲು ರಾಹುಲ್‌ ಗಾಂಧಿಯವರ ಹೆಸರೇ ಕೇಳಿಬರುತ್ತಿದ್ದರೂ ಇಂಡಿಯಾ ಒಕ್ಕೂಟದಲ್ಲಿ ಪ್ರತಿಪಕ್ಷ ನಾಯಕ ಯಾರು ಎನ್ನುವ ಕುತೂಹಲ ಹುಟ್ಟಿಕೊಂಡಿದೆ. ಇಲ್ಲಿಯ ತನಕ ಪ್ರತಿಪಕ್ಷ ನಾಯಕ ಯಾರು ಎಂದು ಇಂಡಿಯಾ ಒಕ್ಕೂಟ ಖಚಿತಪಡಿಸಿಲ್ಲ .

Ad
Ad
Ad
Nk Channel Final 21 09 2023