Ad

ವಯನಾಡು ಭೂ ಕುಸಿತ: ಟೂರಿಸ್ಟ್ ಮಾಲೀಕರಿಗೆ ಆರ್ಥಿಕ ಸಂಕಷ್ಟ!

ವಯನಾಡು ಭೂ ಕುಸಿತ ಹಿನ್ನಲೆ ಪ್ರವಾಸೋದ್ಯಮ ದಿಢೀರ್ ಕುಸಿತ ಕಂಡಿದೆ. ರಾಜಧಾನಿಯಿಂದ ಕೇರಳ ವಯನಾಡು ಮುನ್ನಾರ್ ಪ್ರವಾಸಕ್ಕೆ ಬುಕ್ಕಿಂಗ್ ಆಗಿದ್ದ ಸಂಪೂರ್ಣ ಟಿಕೆಟ್​ಗಳು ಕ್ಯಾನ್ಸಲ್ ಆಗಿದ್ದು ಪ್ರವಾಸೋದ್ಯಮ ಹಾಗೂ ಖಾಸಗಿ ಟೂರಿಸ್ಟ್ ಮಾಲೀಕರು ಮತ್ತು ಬಸ್ ಮಾಲೀಕರಿಗೆ ಆರ್ಥಿಕ ಸಂಕಷ್ಟ ತಂದಿದೆ.

ಬೆಂಗಳೂರು: ವಯನಾಡು ಭೂ ಕುಸಿತ ಹಿನ್ನಲೆ ಪ್ರವಾಸೋದ್ಯಮ ದಿಢೀರ್ ಕುಸಿತ ಕಂಡಿದೆ. ರಾಜಧಾನಿಯಿಂದ ಕೇರಳ ವಯನಾಡು ಮುನ್ನಾರ್ ಪ್ರವಾಸಕ್ಕೆ ಬುಕ್ಕಿಂಗ್ ಆಗಿದ್ದ ಸಂಪೂರ್ಣ ಟಿಕೆಟ್​ಗಳು ಕ್ಯಾನ್ಸಲ್ ಆಗಿದ್ದು ಪ್ರವಾಸೋದ್ಯಮ ಹಾಗೂ ಖಾಸಗಿ ಟೂರಿಸ್ಟ್ ಮಾಲೀಕರು ಮತ್ತು ಬಸ್ ಮಾಲೀಕರಿಗೆ ಆರ್ಥಿಕ ಸಂಕಷ್ಟ ತಂದಿದೆ.

ಮಳೆಗಾಲದಲ್ಲಿ ಅತಿ ಹೆಚ್ಚು ಜನರು ವಯನಾಡಿಗೆ ಪ್ರವಾಸ ಹೋಗುತ್ತಾರೆ. ಮುನ್ನಾರ್-ಕೊಚ್ಚಿ- ಅತಿರಪಲ್ಲಿ ಊಟಿಗೆ ಹೋಗುತ್ತಾರೆ. ಆದರೆ ಭೂ ಕುಸಿತದ ಬಳಿಕ ಎಲ್ಲ ಬುಕ್ಕಿಂಗ್ ಕ್ಯಾನ್ಸಲ್ ಆಗಿದ್ದು ಶೇ 90% ಕೇರಳ ಬುಕ್ಕಿಂಗ್ ಎಲ್ಲವೂ ರದ್ದಾಗಿದೆ.

ಕಳೆದ ಒಂದು ವಾರದಿಂದ ರಾಜ್ಯದಲ್ಲಿಯೂ ವ್ಯಾಪಕ ಮಳೆ ಹಿನ್ನಲೆ ಬಹುತೇಕ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಚಿಕ್ಕಮಗಳೂರು, ಮಡಿಕೇರಿ, ಮಂಗಳೂರು ಟೂರ್ ಬುಕ್ಕಿಂಗ್ ರದ್ದಾಗಿದ್ದು ಟ್ಯಾಕ್ಸಿ ಮಾಲೀಕರಿಗೂ ಸಮಸ್ಯೆ ಎದುರಾಗಿದೆ. ಟ್ಯಾಕ್ಸಿ ಮಾಲೀಕರು ಅಷ್ಟೇ ಅಲ್ಲದೆ ವ್ಯಾಪಕ ಮಳೆ ಅತಿವೃಷ್ಠಿ ಟ್ಯಾಕ್ಸಿ ಚಾಲಕರ ಆದಾಯಕ್ಕೂ ಕುತ್ತು ತಂದಿದೆ.

Ad
Ad
Nk Channel Final 21 09 2023