Bengaluru 22°C
Ad

ದರ್ಶನ್‌ ಭೇಟಿಗೆ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮೀ, ನಟ ವಿನೋದ್ ಪ್ರಭಾಕರ್

Vijayalakshmi

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ವಿಚಾರಣಾಧೀನ ಕೈದಿ ನಟ ದರ್ಶನ್ ನೋಡಲು ಆತನ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ವಿನೋದ್ ಪ್ರಭಾರ್ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.

Ad
300x250 2

ನಟಿ ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ ಎಂಬ ಹಿನ್ನೆಲೆಯಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ದರ್ಶನ್ ಅಂಡ್ ಗ್ಯಾಂಗ್ ಈಗ ಜೈಲು ಸೇರಿದೆ. ನಟ ದರ್ಶನ್, ಆತನ 2ನೇ ಹೆಂಡತಿ ನಟಿ ಪವಿತ್ರಾಗೌಡ, ನಟ ಪ್ರದೂಶ್ ಸೇರಿ ಒಟ್ಟು 16 ಜನರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ, ಮೊದಲ ಪತ್ನಿ ವಿಜಯಲಕ್ಷ್ಮಿ ಅವರು ಗಂಡ ಜೈಲು ಸೇರಿದ 3ನೇ ದಿನ ಆತನನ್ನು ನೋಡಲು ಜೈಲಿಗೆ ಆಗಮಿಸಿದ್ದಾರೆ.

ಜೈಲಿನಲ್ಲಿ ಎರಡು ದಿನ ಕಳೆದಿರುವ ನಟ ದರ್ಶನ್ ನೋಡಲು ಆತನ ಆಪ್ತ ಸ್ನೇಹಿತ ನಟ ವಿನೋದ್ ಪ್ರಭಾಕರ್ ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಇವರನ್ನು ಪೊಲೀಸರು ಹಂತ ಹಂತವಾಗಿ ತಪಾಸಣೆ ಮಾಡಿ ಜೈಲಿನ ಒಳಗೆ ನೋಡಲು ಅವಕಾಶ ಕೊಡಲು ಮುಂದಾಗಿದ್ದಾರೆ. ಗೇಟಿನ ಹೊರಗೆ ಕಾರನ್ನು ನಿಲ್ಲಿಸಿ ಸಾಮಾನ್ಯ ಜನರಂತೆ ನಡೆದುಕೊಂಡ ಹೋದ ವಿನೋದ್ ಪ್ರಭಾಕರ್ ಅವರಿಗೆ ಮೊಬೈಲ್ ನಿಷೇಧದ ಬಗ್ಗೆ ಮಾಹಿತಿ ನೀಡಿ ನಂತರ ಒಳಗೆ ಬಿಡಲು ಮುಂದಾಗಿದ್ದಾರೆ. ಇನ್ನು ನಟ ದರ್ಶನ್ ಮತ್ತು ವಿನೋದ್ ಪ್ರಭಾಕರ್ ಸ್ನೇಹಿತರಾಗಿದ್ದು ‘ನವಗ್ರಹ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಇದಕ್ಕೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಭೇಟಿಗೆ ಅವಕಾಶ ಕೇಳಿದ್ದೆ, ಒಳಗೆ ಬಿಟ್ರೆ ಭೇಟಿ ಆಗುತ್ತೇನೆ. ಕುಟುಂಬದವರಿಗೆ ಮಾತ್ರ ಅವಕಾಶ ಅಂತ ಹೇಳಿದ್ದಾರೆ. ನೊಡೋಣ ಒಳಗಡೆ ಹೋಗಿ ಅಧಿಕಾರಿಗಳಿಗೆ ಕೇಳಿ ಭೇಟಿ ಆಗ್ತೇನೆ ಎಂದರು.

Ad
Ad
Nk Channel Final 21 09 2023
Ad