Ad

ನಾನು ನಂದಿನಿ ಖ್ಯಾತಿಯ ʼವಿಕ್ಕಿಪೀಡಿಯಾʼ ವಿಕಾಸ್‌ಗೆ ಸಂಕಷ್ಟ

Vikas

ಬೆಂಗಳೂರು: ‘ನಾನು ನಂದಿನಿ ಬೆಂಗಳೂರಿಗ್ ಬಂದಿನಿ’ ಖ್ಯಾತಿಯ ವಿಕಾಸ್‌ಗೆ ಸಂಕಷ್ಟ ಎದುರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಕ್ಕಿಪೀಡಿಯಾ ವಿಕಾಸ್ ಅವರು ಹೊಸ ಹೊಸ ವಿಡಿಯೋಗಳನ್ನ ಪ್ರೊಡ್ಯೂಸ್ ಮಾಡ್ತಾ ಇರ್ತಾರೆ.

Ad
300x250 2

ಕಾಂಟ್ರವರ್ಸಿ, ಟ್ರೆಂಡಿಂಗ್, ಪೊಲಿಟಿಕಲ್ ಡ್ರಾಮಾ ಹೀಗೆ ಸೊಸೈಟಿಯಲ್ಲಿ ಏನೇ ಡೆವಲಪ್​ಮೆಂಟ್​ ಆದ್ರು ತಮ್ಮದೇ ಸ್ಟೈಲ್​ನಲ್ಲಿ ಅದಕ್ಕೊಂದು ವಿಶೇಷವಾದ ಕಂಟೆಂಟ್​​ ಕ್ರಿಯೇಟ್ ಮಾಡೋದು ವಿಕಿಪೀಡಿಯ ಹವ್ಯಾಸ. ಈ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಜನರು ನೀರಿನ ಮೊರೆ ಹೋಗಿದ್ದಾಗ ಕರಿಮಣಿ ಮಾಲೀಕ ಹಾಡಿಗೆ ಓನಲ್ಲ ನೀರಿಲ್ಲ ಎಂದು ರೀಲ್ಸ್​ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಇದೀಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರೀಲ್ಸ್​ವೊಂದನ್ನು ಶೇರ್ ಮಾಡಿಕೊಂಡು ವಿಕ್ಕಿಪೀಡಿಯಾ ವಿಕಾಸ್ ಫಜೀತಿಗೆ ಸಿಕ್ಕಿಹಾಕಿಕೊಂಡಿದ್ದಾರೆ.

ವಿಕಾಸ್​ಗೆ ಪೊಲೀಸರು ಖಡಕ್ ವಾರ್ನಿಂಗ್​ ಕೊಟ್ಟಿದ್ದಾರೆ. ವಿಕ್ಕಿಪೀಡಿಯಾ ವಿಕಾಸ್ ಡ್ರಗ್ಸ್ (ಮಾದಕ ವಸ್ತು ವ್ಯಸನ) ವಿಚಾರಕ್ಕೆ ಸಂಬಂಧಿಸಿದಂತ ರೀಲ್ಸ್​ವೊಂದನ್ನು ಶೇರ್ ಮಾಡಿಕೊಂಡಿದ್ದರು. ಇದೇ ರೀಲ್ಸ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಹೀಗೆ ವೈರಲ್​ ಆದ ವಿಡಿಯೋವನ್ನು ನೋಡಿದ ಪೊಲೀಸರು ವಿಕ್ಕಿಪೀಡಿಯಾ ವಿಕಾಸ್​ ಬೈಯಪ್ಪನಹಳ್ಳಿ ಪೊಲೀಸ್​ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ವಿಕ್ಕಿಪೀಡಿಯಾ ವಿಕಾಸ್​ ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

Ad
Ad
Nk Channel Final 21 09 2023
Ad