ಬೆಂಗಳೂರು : ಮಸೀದಿ ಮುಂಭಾಗ ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿರುವ ಘಟನೆ ನಾಗಮಂಗಲದಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿ ತ್ರಿವರ್ಣಧ್ವಜದಲ್ಲಿ ಅಶೋಕ ಚಕ್ರದ ಬದಲು, ಅಲ್ಲ ಒಬ್ಬನೇ ದೇವರು ಅವನ ಹೊರತು ಬೇರೆ ದೇವರಿಲ್ಲ ಎಂದು ಬರೆದು, ಅದರ ಕೆಳಗೆ ತಲ್ವಾರ್ ಚಿನ್ನೆ ಹಾಕಿ ಮುಸ್ಲಿಂರು ಧ್ವಜ ಹಾರಿಸಿರುವುದು ವಿವಾದಕ್ಕೆ ಕಾರಣವಾಗಿದೆ ಎಂದು ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ತಮ್ಮ ಡಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ
ಬಾವುಟದ ಮೇಲಿನ ಉರ್ದು ಬರಹ ಕಂಡೊಡನೆ, ತಕ್ಷಣ ಸ್ಥಳಕ್ಕೆ ಬಂದ ಪುನೀತ್ ಕೆರೆಹಳ್ಳಿ ಮತ್ತು ಹಿಂದೂ ಕಾರ್ಯಕರ್ತರ ತಂಡ, ಖುದ್ದು ಮಸೀದಿಯವರ ಕೈಯಿಂದಲೇ ಧ್ವಜವನ್ನು ತೆರವುಗೊಳಿಸಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
https://x.com/Puneeth74353549/status/1836382068315476180?
Ad