Bengaluru 28°C
Ad

ಮೇಲ್ಮನೆ ಆರು ಕ್ಷೇತ್ರ ಚುನಾವಣೆ : ಶೇ. 79. 91 ಮತದಾನ

ವಿಧಾನ ಪರಿಷತ್ತಿನ ಮೂರು ಶಿಕ್ಷಕರ ಹಾಗೂ ಮೂರು ಪದವೀಧರರ ಕ್ಷೇತ್ರಗಳಿಗೆ ಶಾಂತಿಯುತ ಮತದಾನ ನಡೆದಿದ್ದು, ಶೇ 79. 91 ಮತದಾನವಾಗಿದೆ.

ಬೆಂಗಳೂರು : ವಿಧಾನ ಪರಿಷತ್ತಿನ ಮೂರು ಶಿಕ್ಷಕರ ಹಾಗೂ ಮೂರು ಪದವೀಧರರ ಕ್ಷೇತ್ರಗಳಿಗೆ ಶಾಂತಿಯುತ ಮತದಾನ ನಡೆದಿದ್ದು, ಶೇ 79. 91 ಮತದಾನವಾಗಿದೆ. ಈಶಾನ್ಯ ಪದವೀಧರರ ಶೇ. 69.51, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಶೇ. 65.86, ದಕ್ಷಿಣ ಶಿಕ್ಷಕರ ಕ್ಷೇತ್ರ ಶೇ. 78.19, ಆಗ್ನೇಯ ಶಿಕ್ಷಕರ ಕ್ಷೇತ್ರ ಶೇ.95.27, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ. 82. 56 ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಶೇ.88.07 ಮತದಾನವಾಗಿದೆ.

ಈ ಚುನಾವಣೆಯಲ್ಲಿ 78 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮೂರು ಪದವೀಧರರ ಕ್ಷೇತ್ರದಲ್ಲಿ 3,63,573 ಹಾಗೂ ಮೂರು ಶಿಕ್ಷಕರ ಕ್ಷೇತ್ರದಲ್ಲಿ 70, 260 ಮತದಾರರು ಸೇರಿ ಒಟ್ಟು 4,33,833 ಮತದಾರರು ಹಕ್ಕು ಹೊಂದಿದ್ದರು.

Ad
Ad
Nk Channel Final 21 09 2023
Ad