ಸ್ಯಾಂಡಲ್​ವುಡ್​ನಿಂದ ಉಪೇಂದ್ರನನ್ನು ಬ್ಯಾನ್‌ ಮಾಡಿ: ಫಿಲ್ಮ್‌ ಚೇಂಬರ್‌ಗೆ ಪತ್ರ

ಬೆಂಗಳೂರು: ರಿಯಲ್​ ಸ್ಟಾರ್​ ಉಪೇಂದ್ರ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು. ಕೂಡಲೇ ಬಂಧಿಸಬೇಕು ಎಂದು ಘೋಷಣೆ ಕೂಗುವ ಮೂಲಕ ನಟನ ಪ್ರತಿಕೃತಿ ದಹಿಸಿ ಬೆಂಗಳೂರು ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚೆಗೆ ನಟ ಉಪೇಂದ್ರ ಫೇಸ್​ಬುಕ್​ ಮತ್ತು ಇನ್​​ಸ್ಟಾ ಲೈವ್​ನಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿದ್ದರು. ಇದೇ ವಿಚಾರವಾಗಿ ಉಪೇಂದ್ರ ಅವರ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ನಟನ ವಿರುದ್ಧ ಘೋಷಣೆ ಕೂಗಿ ಗಡಿ ಪಾರು ಮಾಡುವಂತೆ ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಸದ್ಯ ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.

ಪತ್ರವನ್ನು ಬರೆದಿರುವ ವ್ಯಕ್ತಿ ಸಾಮಾಜಿಕ ಕಾರ್ಯಕರ್ತ ನವೀನ್ ಎನ್ನುವವರಿಂದ ಕರ್ನಾಟಕ ಚಲನಚಿತ್ರಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಚಿತ್ರರಂಗದಿಂದ 5 ವರ್ಷ ಬ್ಯಾನ್ ಮಾಡಲು ಪತ್ರದಲ್ಲಿ ಮನವಿ ಮಾಡಿ ಉಲ್ಲೇಖ ಮಾಡಿದ್ದಾರೆ. ಉಪೇಂದ್ರ ಅವರು ಗಲಭೆ, ಅಶಾಂತಿ ಸೃಷ್ಟಿಸಲು ಉಪೇಂದ್ರ ಹೊರಟಿದ್ದಾರೆ. ಅವರು ಜಾತಿ ಜಾತಿಗಳನ್ನ ಎತ್ತಿಕಟ್ಟೊ ಕೆಲಸ ಮಾಡಿದ್ದಾರೆ.

ಈ ಪ್ರಕರಣವನ್ನು ಫಿಲ್ಮ್ ಚೇಂಬರ್ ಗಂಭೀರವಾಗಿ ಪರಿಗಣಿಸಬೇಕು. ನಾಡಿನ ಗೌರವವನ್ನು ಎತ್ತಿಹಿಡಿದು ಶೋಷಿತರ ಪರ ನಿಲ್ಲಬೇಕು. ಆದ್ದರಿಂದ ಉಪೇಂದ್ರ ಅವರನ್ನು ಈ ಕೂಡಲೆ ಕನಿಷ್ಠ 5 ವರ್ಷ ಚಿತ್ರರಂಗದಿಂದ ನಿಷೇಧ ಹೇರಬೇಕು ಎಂದು ಮನವಿ ಸಲ್ಲಿಸಲಿದ್ದಾರೆ.

ಇನ್ನು ಉಪೇಂದ್ರಗೆ ರಿಲೀಫ್ ಸಿಕ್ಕಿದೆ. ಉಪೇಂದ್ರ ವಿರುದ್ಧದ ಎಫ್ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಚೆನ್ನಮ್ಮನಕೆರೆ ಪೊಲೀಸ್ ಠಾಣೆಯ ಎಫ್ ಐ ಆರ್ ಗೆ ತಡೆಯಾಜ್ಞೆ ಕೊಟ್ಟು ಹೈಕೋರ್ಟ್ ಆದೇಶಿಸಿದೆ.

Ashitha S

Recent Posts

ನಗರ ಸಾರಿಗೆ ಬಸ್‌ ಮಾರ್ಗ ಬದಲಾಯಿಸಲು ಆಗ್ರಹ

ನಗರದಲ್ಲಿ ಸಂಚರಿಸುವ ನಗರ ಸಾರಿಗೆಯ ಎಲ್ಲ ಬಸ್‌ಗಳು ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯ ವೃತ್ತದ ಮೂಲಕ ಹಾದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಎಂದು…

1 min ago

ನಟಿ ಮಾಳವಿಕಾ ಅವಿನಾಶ್ ತಂದೆ ನಟೇಶನ್ ಗಣೇಶನ್ ನಿಧನ

ರಾಜ್ಯ ಬಿಜೆಪಿ ಉಪಾಧ್ಯಕ್ಷ, ನಟಿ, ಮಾಳವಿಕಾ ಅವಿನಾಶ್ ಅವರ ತಂದೆ ನಟೇಶನ್ ಗಣೇಶನ್ ಅವರು ನಿಧನರಾಗಿದ್ದಾರೆ.

9 mins ago

ಪತ್ನಿಯ ಗುಪ್ತಾಂಗವನ್ನು ಮೊಳೆಗಳಿಂದ ವಿರೂಪಗೊಳಿಸಿ,ಬೀಗ ಹಾಕಿದ ಕ್ರೂರ ಪತಿ

ಪುಣೆಯಲ್ಲಿ ಭೀಕರ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿಯ ಜನನಾಂಗವನ್ನು ಕಬ್ಬಿಣದ ಮೊಳೆಗಳಿಂದ ವಿರೂಪಗೊಳಿಸಿದ್ದಾನೆ ಮತ್ತು ಆಕೆಯ ಮೇಲೆ ಸಂದೇಹ ವ್ಯಕ್ತಪಡಿಸಿದ…

26 mins ago

ಬೀದರ್: ಕಾರ್ಮಿಕರ ಮಕ್ಕಳಿಗೆ ‘ಕೂಸಿನ ಮನೆ’ ಆಸರೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಮಹಿಳಾ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ಆಸರೆಯಾಗಿದೆ.

32 mins ago

ಬಿಜೆಪಿ ಮುಖಂಡ ಅರೆಸ್ಟ್: ರಾತ್ರೋರಾತ್ರಿ ಠಾಣೆಯಲ್ಲಿ ಧರಣಿ ನಡೆಸಿದ ಶಾಸಕ ಹರೀಶ್ ಪೂಂಜಾ

ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್…

51 mins ago

ತಾಯಿ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

ತಾಯಿ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದ ನೌಬತ್‌ಪುರ ಪ್ರದೇಶದಲ್ಲಿ ಚಲಿಸುತ್ತಿದ್ದ…

55 mins ago