Ad

ಮೆಕ್ಕಾ ಹಜ್ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ಇಬ್ಬರು ಸಾವು

ಮುಸ್ಲಿಂರ ಪವಿತ್ರ ಸ್ಥಖವಾದ ಮೆಕ್ಕಾದಲ್ಲಿನ ಹಜ್‌ ಯಾತ್ರೆ ಸಮಯದಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿಗೆ ದಾಖಲಾದ ಪರಿಣಾಮ ಸುಮಾರು 600ಕ್ಕೂ ಯಾತ್ರಿಗಳ ಪೈಕಿ 68 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ.

ಬೆಂಗಳೂರು: ಮುಸ್ಲಿಂರ ಪವಿತ್ರ ಸ್ಥಖವಾದ ಮೆಕ್ಕಾದಲ್ಲಿನ ಹಜ್‌ ಯಾತ್ರೆ ಸಮಯದಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿಗೆ ದಾಖಲಾದ ಪರಿಣಾಮ ಸುಮಾರು 600ಕ್ಕೂ ಯಾತ್ರಿಗಳ ಪೈಕಿ 68 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ. ಅದರಲ್ಲಿ ಬೆಂಗಳೂರು ಮೂಲದ ಇಬ್ಬರು ಸಹ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಬಕ್ರೀದ್​ ಹಬ್ಬ ಪ್ರಯುಕ್ತ ಹಜ್​ ಯಾತ್ರೆಗೆ ಹೋಗಿದ್ದರು ಎನ್ನಲಾಗಿದೆ.

Ad
300x250 2

ಬೆಂಗಳೂರು ಮೂಲದ ಇಬ್ಬರು ಯಾತ್ರಿಕರೂ ಮೆಕ್ಕಾದಿಂದ 8 ಕಿ.ಮೀ ದೂರವಿರುವಾಗಲೇ ಸಾನ್ನಪ್ಪಿದ್ದಾರೆ. ಮೃತರನ್ನು ಕೌಸರ್​ ರುಕ್ಸಾನ್​ (69) ಮತ್ತು ಮೊಹಮ್ಮದ್​ ಇಲಿಯಾಸ್​ (50) ಎಂದು ಗುರುತಿಸಲಾಗಿದೆ.

Ad
Ad
Nk Channel Final 21 09 2023
Ad