ಬೆಂಗಳೂರು: ಟಿಪ್ಪರ್ ಚಾಲಕನೊಬ್ಬ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ, ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡ ಘಟನೆ ಬೆಂಗಳೂರಿನ ಮೈಸೂರು ರಸ್ತೆ ಸಮೀಪ ದಾರುಣ ದುರಂತ ನಡೆದಿದೆ.
ಮೈಸೂರು ರಸ್ತೆ ಗುಡ್ಡದಹಳ್ಳಿ ಬಳಿ ಘೋರ ಅಪಘಾತ ಸಂಭವಿಸಿದೆ. ಮಕ್ಕಳು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮೇಲೆ ಕುಳಿತು ಆಟವಾಡುತ್ತಿದ್ದರು. ಯಮನಂತೆ ಬಂದ ಟಿಪ್ಪರ್ ಇವರನ್ನು ನೆಲಕ್ಕೆ ಕೆಡವಿದೆ. ಮಕ್ಕಳ ಮೇಲೆ ಹರಿದ ಪರಿಣಾಮ ಮಕ್ಕಳು ನಜ್ಜುಗುಜ್ಜಾಗಿದ್ದಾರೆ. ನಿಯಂತ್ರಣಕ್ಕೆ ಸಿಗದ ಟಿಪ್ಪರ್ ಐದಾರು ವಾಹನಗಳ ಮೇಲೆ ಹರಿದಿದೆ.
ಹಾಲೋಬಾಕ್ಸ್ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ನಜ್ಜಗುಜ್ಜಾಗಿರುವ ಮಕ್ಕಳ ಶವಗಳನ್ನು ಆಂಬ್ಯುಲೆನ್ಸ್‌ಗೆ ಹಾಕಿ ಒಯ್ಯಲಾಗಿದೆ. ಅಪಘಾತದ ದಾರುಣತೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.