Bengaluru 29°C
Ad

ಮಹಾಲಕ್ಷ್ಮಿ ಕೊಲೆ ಕೇಸ್‌ನಲ್ಲಿ ಟ್ವಿಸ್ಟ್‌ : ಹಂತಕ ಅಶ್ರಫ್ ಅಲ್ಲ, ಇನ್ನೊಬ್ಬ!

ಇಡೀ ದೇಶವನ್ನೆ ಬೆಚ್ಚಿಬೀಳಿಸಿರೋ ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆಗೆ ರೋಚಕ ತಿರುವು ಸಿಕ್ಕಿದೆ, 29 ವರ್ಷದ ಮಹಾಲಕ್ಷ್ಮಿ ಮೃತದೇಹ ಪೀಸ್ ಪೀಸ್ ಆಗಿ ಪತ್ತೆಯಾಗಿದ್ದ ಕೇಸ್ ತನಿಖೆ ಚುರುಕುಗೊಂಡಿದೆ. ಆದರೆ ಕೊಲೆಗಾರ ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿರೋ ಹೊತ್ತಲ್ಲೇ ಹಂತಕನ ಸುಳಿವು ಪತ್ತೆಯಾಗಿದೆ ಅಂತ ಖುದ್ದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು:  ಇಡೀ ದೇಶವನ್ನೆ ಬೆಚ್ಚಿಬೀಳಿಸಿರೋ ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆಗೆ ರೋಚಕ ತಿರುವು ಸಿಕ್ಕಿದೆ, 29 ವರ್ಷದ ಮಹಾಲಕ್ಷ್ಮಿ ಮೃತದೇಹ ಪೀಸ್ ಪೀಸ್ ಆಗಿ ಪತ್ತೆಯಾಗಿದ್ದ ಕೇಸ್ ತನಿಖೆ ಚುರುಕುಗೊಂಡಿದೆ. ಆದರೆ ಕೊಲೆಗಾರ ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿರೋ ಹೊತ್ತಲ್ಲೇ ಹಂತಕನ ಸುಳಿವು ಪತ್ತೆಯಾಗಿದೆ ಅಂತ ಖುದ್ದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ಇನ್ನ ಅಶ್ರಫ್ ಎಂಬಾತನ‌ ಮೇಲೆ ಮಹಾಲಕ್ಷ್ಮಿ ಪತಿ ಹೇಮಂತ್ ಅನುಮಾನ ವ್ಯಕ್ತಪಡಿಸಿದ್ರು. ಸದ್ಯ ಈ ಆರೋಪಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಕೊಲೆಯಲ್ಲಿ ಈತನ ಪಾತ್ರ ಇಲ್ಲ‌ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೆ ಪೊಲೀಸರಿಗೆ ಮನೆಯಲ್ಲಿ ಮಹಾಲಕ್ಷ್ಮಿ ಮೊಬೈಲ್ ಸಿಕ್ಕಿದ್ದು, ಪೊಲೀಸರು ಈ ಮೊಬೈಲ್ ನಲ್ಲಿ ಇರೋ ಸಾಕ್ಷಿಗಳ ಪರಿಶೀಲನೆ ನಡೆಸ್ತಿದ್ದಾರೆ. ಹೀಗೆ ಒಂದು ಕಡೆ ಪೊಲೀಸರು ತನಿಖೆ ಚುರುಕುಗೊಳಿಸಿದ್ರೆ ಮತ್ತೊಂದು ಕಡೆ ಮೃತ ಮಹಾಲಕ್ಷ್ಮಿ ಕುಟುಂಬಸ್ಥರ ಕನಸಲ್ಲಿ ಬರ್ತಿದ್ದಾಳಂತೆ. ಸದ್ಯ ಮಹಾಲಕ್ಷ್ಮಿ ಅಸ್ತಿ ಸಂಗ್ರಹಿರೋ ಪತಿ ಹೇಮಂತ್ ದಾಸ್ ಆಕೆಯ ಮುಕ್ತಿಗೆ ರಾಮೇಶ್ವರಂಗೆ ತೆರಳಿದ್ದು ಅಲ್ಲಿಯೇ ಅಸ್ತಿ ವಿಸರ್ಜನೆ ಮಾಡ್ತಿದ್ದಾರೆ.

Ad
Ad
Nk Channel Final 21 09 2023