ಬೆಂಗಳೂರು: ಎಸ್ಎಸ್ಎಂಆರ್‌ವಿ ಕಾಲೇಜಿನಲ್ಲಿ ಲೋಕಸಭೆ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದ್ದು, ಕೌಂಟಿಂಗ್ ಸೆಂಟರ್‌ಗೆ ಆಗಮಿಸಿದ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಪೊಲೀಸರ ವಿರುದ್ಧ ಬ್ಯಾರಿಕೇಡ್ ತೆಗೆಯದ್ದಕ್ಕೆ ಕಿಡಿಕಾರಿದರು.
ಕಾರಿನ ಹಿಂಭಾಗ ಕುಳಿತಿದ್ದ ತುಷಾರ್ ಗಿರಿನಾಥ್ ಕಿಟಿಕಿ ಗ್ಲಾಸ್ ಇಳಿಸಿ ಪೊಲೀಸರಿಗೆ ಅವಾಜ್ ಹಾಕಿದ್ದರು. ಹುಚ್ಚ ನಾನು ಯಾರೆಂದು ಗೊತ್ತಾಗಲ್ವಾ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದರು. ಯಾವ ರೀತಿಯಲ್ಲಿ ಹ್ಯಾಂಡಲ್ ಮಾಡುತ್ತಿದ್ದೀರಿ ಎಂದು ಸಿಟ್ಟಾದರು. ಬಳಿಕ ಪೊಲೀಸರು ತಿಳಿಯದೆ ಹೀಗಾಯಿತು ಎಂದಾಗ ಕೋಪದಲ್ಲೇ ಒಳಹೋದರು.
ಮತ ಎಣಿಕೆ ಕೇಂದ್ರ ಒಳಗೆ ಬಂದ ತುಷಾರ್ ಗಿರಿನಾಥ್ ಮೀಡಿಯಾ ಸೆಂಟರ್ ಬಳಿ ಬಂದು ಅಲ್ಲೂ ಗರಂ ಆದರು. ಮೀಡಿಯಾ ಸೆಂಟರ್ ಒಳಗೆ ಟಿವಿ ನೋಡುತ್ತಾ ನಿಂತಿದ್ದ ಚುನಾವಣಾ ಕರ್ತವ್ಯ ನಿರತ ಪೊಲೀಸ್ ಹಾಗೂ ಇತರ ಸಿಬ್ಬಂದಿ ಮೇಲೆ ರೇಗಾಡಿದರು. ನಿಮ್ಮ ಕೆಲಸ ನೋಡಿ ಅದು ಬಿಟ್ಟು ಟಿವಿ ನೋಡುತ್ತಾ ನಿಲ್ಲಬೇಡಿ. ಎಲ್ಲರ ಮೇಲೆ ಆ್ಯಕ್ಷನ್ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.