Categories: ತುಮಕೂರು

ಬೇಸಿಗೆ ಮುಗಿದು ಮಳೆಗಾಲ ಸ್ವಾಗತಿಸುವ ಕಾರ ಹುಣ್ಣಿಮೆ ಹಬ್ಬ

ತುಮಕೂರು: ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿಯ ಕರೀಕೆರೆ ಗ್ರಾಮದಲ್ಲಿ ಬಹಳ ಸಡಗರದಿಂದ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಉತ್ಸವದೊಂದಿಗೆ ಕಾರ ಹುಣ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಜಿಲ್ಲೆಯಾದ್ಯಂತ ಗ್ರಾಮಸ್ಥರು ತಮ್ಮ ಹೊಲ ತೋಟಗಳಲ್ಲಿ ಬೆಳೆದಿದ್ದ ಮಾವು, ಬೇವು ಬೀಟೆ ಸೊಪ್ಪುಗಳನ್ನು ತಂದು ಮೊದಲಿಗೆ ಜಾನುವಾರುಗಳ ಕೊಟ್ಟಿಗೆಯನ್ನು ಅಲಂಕರಿಸಿ ನಂತರ ಜಾನುವಾರುಗಳನ್ನು ಮೈತೊಳೆದು ವಿವಿಧ ಬಣ್ಣಗಳಿಂದ ಕೊಂಬುಗಳಿಗೆ ಹಾಗೂ ದೇಹಕ್ಕೆ ಅಲಂಕರಿಸಿ, ಮನೆಯಲ್ಲಿ ಪೂಜಿಸಿ ನಂತರ ಮನೆಯಲ್ಲಿ ತಯಾರಿಸಿದ ಬಗೆ ಬಗೆಯ ಅಡುಗೆಯ ತಿನಿಸುಗಳನ್ನು ನೈವೇದ್ಯ ಮೂಲಕ ರಾಸುಗಳಿಗೆ ಉಣಬಡಿಸಿ ಸಂಜೆ ವೇಳೆ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಉತ್ಸವದೊಂದಿಗೆ ಊರಿನ ಕರ್‍ಗಲ್ಲು ಪೂಜೆ ಸಲ್ಲಿಸಿ, ಕರೆಹಂಬಳಿಯ ಬಳ್ಳಿಯನ್ನು ಪೂಜಿಸಿ ಮನೆಗೆ ಒಯ್ಯಲಾ ಯಿತು.

ಹಬ್ಬದ ಹಿನ್ನೆಲೆ : ಕಾರ ಹಬ್ಬ ಅಥವಾ ಕಾರ ಹುಣ್ಣಿಮೆಯ ಹಬ್ಬವನ್ನು ಈ ದಿನವು ಸಾಮಾನ್ಯವಾಗಿ ಮುಂಗಾರು ಮಳೆಯ ಆರಂಭದ ನಂತರ ಮೊದಲ ಹುಣ್ಣಿಮೆಯ ದಿನವನ್ನು ಸೂಚಿಸುತ್ತದೆ. ರೈತರು ಜಾನುವಾರುಗಳನ್ನು ಪೂಜಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ ಮತ್ತು ದಿನವು ಬೇಸಿಗೆಯ ಅಂತ್ಯವನ್ನು ಸೂಚಿಸುತ್ತದೆ. ಈ ಹಬ್ಬದಲ್ಲಿ ರೈತರು ತಮ್ಮ ಬೆಳೆಗಳಿಗೆ ಉತ್ತಮ ಮಳೆಯಾಗಲಿ, ಉತ್ತಮ ಫಸಲು ಬರಲಿ ಎಂದು ಪ್ರಾರ್ಥಿಸುತ್ತಾರೆ.
ಈ ಹಬ್ಬವು ಮಳೆಗಾಲದ ಸ್ವಾಗತದ ಸಂಕೇತವೂ ಹೌದು. ಕಾರ ಹುಣ್ಣಿಮೆಯಂದು ಬೆಳಿಗ್ಗೆ ಉತ್ತರ ಕರ್ನಾಟಕದ ಭಾಗದಲ್ಲಿ ಮಹಿಳೆಯರು ಸಾಮೂಹಿಕವಾಗಿ ಮರದ ಸುತ್ತಲೂ ಪವಿತ್ರ ದಾರಗಳನ್ನು ಕಟ್ಟಿ ಪ್ರಾರ್ಥಿಸುತ್ತಾರೆ. ಇದನ್ನು ವಟು ಸಾವಿತ್ರಿ ಪೂಜೆ ಎಂದೂ ಕರೆಯುತ್ತಾರೆ, ಇದನ್ನು ಪತಿಗಳ ದೀರ್ಘಾಯು?ಕ್ಕಾಗಿ ಮಾಡಲಾಗುತ್ತದೆ.

ಜಾನುವಾರು ಪೂಜೆಯ ಅಂಗವಾಗಿ, ಹೋಳಿಗೆ ಮತ್ತು ಕಡುಬುಗಳಂತಹ ಸಾಂಪ್ರದಾಯಿಕ ಸಿಹಿ ಭಕ್ಷ್ಯಗಳನ್ನು ಸಹ ತಯಾರಿಸಲಾಗುತ್ತದೆ ಮತ್ತು ಆಚರಣೆಯ ದಿನದಂದು ಜಾನುವಾರುಗಳಿಗೆ ನೈವೇದ್ಯ ಮಾಡಲಾಗುತ್ತದೆ. ಪೂಜೆಯ ಅಂಗವಾಗಿ ರೈತರು ತಮ್ಮ ಹೋರಿಗಳನ್ನು ತೊಳೆದು ಕೊಂಬುಗಳಿಗೆ ಬಣ್ಣ ಬಳಿದು ಅವುಗಳನ್ನು ಅಲಂಕರಿಸುತ್ತಾರೆ. ಇದು ಹೊಲಗಳಲ್ಲಿ ತಮ್ಮ ಜೊತೆಯಲ್ಲಿ ಕೆಲಸ ಮಾಡುವ ಎತ್ತುಗಳಿಗೆ ಕೃತಜ್ಞತೆಯನ್ನು ತೋರಿಸುವುದು.

ಊರಿನ ಗೌಡ ಅಥವಾ ಪಟೇಲರು ಗ್ರಾಮದ ಒಳಿತಿಗಾಗಿ ಹಾಗೂ ಜಾನುವಾರುಗಳ ಸುರಕ್ಷತೆಗಾಗಿ ಊರಿನ ಹೆಬ್ಬಾಗಿಲಿನಲ್ಲಿರುವ ಕರ್‍ಗಲ್ಲುಗೆ ಪೂಜೆ ಸಲ್ಲಿಸಿ ಕರೆಹಂಬಳಿಯ ಪೂಜಿಸುವುದರಿಂದ ಹೈನುಗಾರಿಕೆ ಸಮೃದ್ದಿಯಾಗಿ ಎಂಬ ಹಿರಿಯರ ಸಂಪ್ರದಾಯದಂತೆ ಮಹಾಪೂಜೆ ಕೈಗೊಳ್ಳುತ್ತಾರೆ.

Ashika S

Recent Posts

ಸ್ವಾತಿ ಮೇಲಿನ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಬಿಭವ್ ಅರ್ಜಿ

ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ…

19 mins ago

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

1 hour ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

1 hour ago

ಪೊಲೀಸ್‌ ಕಸ್ಟಡಿಯಲ್ಲಿಯೇ ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದು ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

1 hour ago

ಆತ್ಮಹತ್ಯೆಗೆ ಮುನ್ನ ನಟ ಚಂದು ಲಾಸ್ಟ್​ ಮೆಸೇಜ್​ ಇದು

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​…

2 hours ago

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

2 hours ago